Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸಾವಯವ ಕೃಷಿಯಿಂದ ಇಳುವರಿ ಕಡಿಮೆ,...

ಸಾವಯವ ಕೃಷಿಯಿಂದ ಇಳುವರಿ ಕಡಿಮೆ, ಆರೋಗ್ಯಕ್ಕೆ ಉತ್ತಮ

ಕೃಷಿ ಕ್ಷೇತ್ರದ ಅನನ್ಯ ಸಾಧಕ ಕುಮಾರ್ ಪೆರ್ನಾಜೆ

ಸಂಶುದ್ದೀನ್ ಸಂಪ್ಯಸಂಶುದ್ದೀನ್ ಸಂಪ್ಯ23 Dec 2018 11:21 AM IST
share
ಸಾವಯವ ಕೃಷಿಯಿಂದ ಇಳುವರಿ ಕಡಿಮೆ, ಆರೋಗ್ಯಕ್ಕೆ ಉತ್ತಮ

ಇಂದು ಕಿಸಾನ್ ದಿನ: ಈ ಹಿನ್ನೆಲೆಯಲ್ಲಿ ನಾಡಿನ ವಿವಿಧ ರೈತರನ್ನು ಪತ್ರಿಕೆ ಸಂದರ್ಶನ ಮಾಡಿದೆ. ಅವರ ಸಾಧನೆ, ಕೃಷಿಯ ಅನುಭವಗಳು, ಎದುರಿಸುತ್ತಿರುವ ಸವಾಲು, ಕೃಷಿಯ ಮೂಲಕ ಅವರು ಕಟ್ಟಿಕೊಂಡಿರುವ ಬದುಕನ್ನು ರೈತರು ಹಂಚಿಕೊಂಡಿದ್ದಾರೆ.

ಪುತ್ತೂರಿನ ಪೆರ್ನಾಜೆಯ ಕುಮಾರ್ ಹಲವಾರು ಕೃಷಿ ಸಂಶೋಧನಾ ಆವಿಷ್ಕಾರವನ್ನು ನಡೆಸಿದ್ದಾರೆ. ಬೋರ್ಡೋ ದ್ರಾವಣ ಸ್ಪ್ರೇಯಿಂಗ್ ಟೆಕ್ನಿಕ್, ಜೇನು ಕೃಷಿ, ಸಿಮೆಂಟ್ ಶಿಟ್‌ನಲ್ಲಿ ಜೇನು ಪೆಟ್ಟಿಗೆ, ಕೋತಿ ಕೋವಿ ನಿರ್ಮಾಣ, ಗ್ರಾಮೀಣ ಕಲಾವಿದರಿಗೆ ಪ್ರೋತ್ಸಾಹ, ಗ್ರಾಮೀಣ ಸಾಧಕರಿಗೆ ಸನ್ಮಾನ, ಸಮಾಜ ಮುಖಿ ವ್ಯಕ್ತಿತ್ವ ಇಂತಹ ಅನನ್ಯ ಅನ್ವೇಷಣೆ ಮತ್ತು ಸಮಾಜಮುಖಿ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು. ಕುಮಾರ್ ಪೆರ್ನಾಜೆಯ ಸೇವೆಯನ್ನು ಗುರುತಿಸಿ ಅವರಿಗೆ ಹಲವಾರು ಸನ್ಮಾನಗಳು ನಡೆದಿದ್ದು, ಪ್ರತಿಷ್ಠಿತ ಉದಯೋನ್ಮುಖ ರೈತ, ಜಿಲ್ಲಾ ರಾಜ್ಯೋತ್ಸವ, ಆವಿಷ್ಕಾರಿ ರೈತ, ಕೃಷಿ ಪಂಡಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಷ್ಟ್ರೀಯ ರೈತದಿನ ಅಂಗವಾಗಿ ವಾರ್ತಾಭಾರತಿ ನಡೆಸಿದ ಸಂದರ್ಶನದಲ್ಲಿ ಕುಮಾರ್ ಪೆರ್ನಾಜೆ ತನ್ನ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ.

►ನೀವು ಮಾಡುತ್ತಿರುವ ಪ್ರಮುಖ ಕೃಷಿ ಯಾವುದು? ಎಷ್ಟು ಸಮಯದಿಂದ ಮಾಡುತ್ತಿದ್ದೀರಿ? ಇದು ನಿಮ್ಮ ಬದುಕಿಗೆ ಎಷ್ಟರ ಮಟ್ಟಿಗೆ ಪ್ರಯೋಜನಕಾರಿ, ಲಾಭದಾಯಕವಾಗಿದೆ?

 ಜಿಲ್ಲೆಯಲ್ಲಿನ ಎಲ್ಲಾ ರೈತರಂತೆ ನಾನೂ ಅಡಿಕೆ ಬೆಳೆಯುತ್ತಿದ್ದೇನೆ. ಅದರೊಂದಿಗೆ ಜೇನು ಕೃಷಿ, ಬಾಳೆ ಕೃಷಿ, ಅರಿಶಿನ, ಲವಂಗ ಕೃಷಿ ಮಾಡುತ್ತಿದ್ದೇನೆ. ಜೇನು ನನ್ನ ಹೆಚ್ಚಿನ ಆಸಕ್ತಿಯ ಕೃಷಿಯಾಗಿದೆ. ಜೇನು ಕೃಷಿ ಬಗ್ಗೆ ಭಾಗಮಂಡಲದಲ್ಲಿ 3 ತಿಂಗಳ ಸರಕಾರಿ ತರಬೇತಿ ಪಡೆದಿದ್ದೇನೆ. ನನ್ನ ತೋಟದಲ್ಲಿ ಸುಮಾರು 60 ವೈವಿಧ್ಯ ತಳಿಗಳ ಬಾಳೆ ಕೃಷಿ ಮಾಡುತ್ತಿದ್ದೇನೆ. ಅರಿಶಿನ ಮತ್ತು ಲವಂಗದಿಂದ ಉತ್ತಮ ಬೆಳೆ ತೆಗೆದಿದ್ದೇನೆ.

►ಕೃಷಿಯನ್ನೇ ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣವೇನು?

 ನನ್ನ ತಂದೆ ಕೃಷಿಕರಾಗಿದ್ದರು. ಶಾಲಾ ಶಿಕ್ಷಣವಿಲ್ಲದ ಅವರು ಶ್ರಮಜೀವಿಯಾಗಿದ್ದರು. ಆ ಕಾಲದಲ್ಲಿ ಪೆಟ್ಟಿಗೆಯಲ್ಲಿ ಜೇನು ಬೆಳೆಸುವ ಪದ್ಧತಿಯಿರಲಿಲ್ಲ. ಅವರು ಕಾಡಿನಿಂದಲೇ ಸಾಕಷ್ಟು ಜೇನು ಸಂಗ್ರಹ ಮಾಡುತ್ತಿದ್ದರು. ಇದರಿಂದಾಗಿ ನನಗೆ ಸಣ್ಣ ಪ್ರಾಯದಲ್ಲೇ ಜೇನಿನೊಂದಿಗೆ ಸಾಂಗತ್ಯ ಬೆಳೆದು ಬಂದಿತ್ತು. ಟಿಸಿಎಚ್ ಮಾಡಿದ್ದ ನನಗೆ ಶಾಲಾ ಶಿಕ್ಷಕರಾಗಲು ಹಲವು ಅವಕಾಶಗಳು ಬಂದಿತ್ತು. ಆದರೆ ನಾನು ಮನೆ ಬಿಟ್ಟು ಹೊರ ಹೋಗುವುದು ತಂದೆಗೂ ಇಷ್ಟವಿರಲಿಲ್ಲ, ನನಗೂ ಆಸಕ್ತಿಯಿರಲಿಲ್ಲ ಆ ಕಾರಣಕ್ಕೆ ನಾನು ಎಲ್ಲೂ ಹೋಗದೆ ಕೃಷಿಯಲ್ಲೇ ತೊಡಗಿಸಿಕೊಂಡೆ.

►ಆರಂಭದಲ್ಲಿ ನೀವು ಎದುರಿಸಿದ ಸವಾಲುಗಳು ಏನೇನು? ಇದರ ಸೋಲು ಗೆಲುವುಗಳನ್ನು ಹಂಚಿಕೊಳ್ಳಿ.

ನನ್ನ ಕೃಷಿ ಚಟುವಟಿಕೆಯ ಆರಂಭಿಕ ದಿನಗಳಲ್ಲಿ ಕೃಷಿಗೆ ಪುತ್ತೂರಿನಲ್ಲಿ ಸರಿಯಾದ ಮಾರುಕಟ್ಟೆಗಳಿರಲಿಲ್ಲ. ಬಾಳೆಕಾಯಿ ಸೇರಿದಂತೆ ಎಲ್ಲಾ ಬೆಳೆಗಳನ್ನೂ ಮಂಗಳೂರಿಗೆ ಕಳುಹಿಸಬೇಕಿತ್ತು. ಅವರು ನೀಡಿದ ಧಾರಣೆಯನ್ನು ಪಡೆದುಕೊಳ್ಳಬೇಕಿತ್ತು. ಅಲ್ಲಿ ನಿರೀಕ್ಷಿತ ಮೌಲ್ಯ ಸಿಗುತ್ತಿರಲಿಲ್ಲ. ಇದರಿಂದಾಗಿ ಕೆಲವೊಮ್ಮೆ ತುಂಬಾ ನಷ್ಟಗಳಾಗುತ್ತಿತ್ತು. ಈಗ ಅಂತಹ ಸಮಸ್ಯೆಗಳಿಲ್ಲ. ಪುತ್ತೂರಿನಲ್ಲಿ ಸಾಕಷ್ಟು ಮಾರುಕಟ್ಟೆ ವ್ಯವಸ್ಥೆಗಳಿವೆ. ಅಲ್ಲದೆ ಸ್ಥಳೀಯವಾಗಿ ಖರೀದಿದಾರರು ಆಗಮಿಸಿ ಪಡೆದುಕೊಳ್ಳುತ್ತಿದ್ದಾರೆ ಆರ್ಥಿಕವಾಗಿ ಸಮಸ್ಯೆಗಳಾಗುತ್ತಿಲ್ಲ. ಜೇನು ಕುಟುಂಬಗಳಿಗೆ ಕೇಸರಿ ಇರುವೆ ಬಂದು ಹಲವು ಬಾರಿ ನಷ್ಟಗಳಾಗಿತ್ತು. ಬಾಳೆ ಗಿಡಗಳಿಗೂ ರೋಗ ಬಂದು ತೊಂದರೆಯಾಗಿತ್ತು. ಹೊಸ ಬಾಳೆ ತಳಿಗಳಿಗೆ ಹೆಚ್ಚು ರೋಗಗಳು ಕಾಡುತ್ತಿರುವುದರಿಂದ ಕೆಲವೊಮ್ಮೆ ನಷ್ಟಗಳಾಗಿದೆ. ಆದರೆ ಮುಂದಿನ ವರ್ಷಕ್ಕೆ ಆ ತೊಂದರೆ ಮಾಯವಾಗಿ ಹೋಗಿತ್ತು. ಕಾಡು ಪ್ರಾಣಿಗಳಿಂದಲೂ ತೊಂದರೆಯಾಗಿದೆ.

►ಸಾವಯವ ಗೊಬ್ಬರಗಳನ್ನು ಬಳಸಿ ಮಾಡುವ ಕೃಷಿ ಕುರಿತು ನಿಮ್ಮ ಅನಿಸಿಕೆ? ಇದರಿಂದ ರೈತ ಯಶಸ್ವಿಯಾಗಬಹುದೇ?

ಸಾವಯವ ಕೃಷಿ ಪದ್ದತಿಯಿಂದ ಮಣ್ಣಿನ ಫಲವತ್ತತೆ ದೀರ್ಘವಾಗುತ್ತದೆ. ಭೂಮಿಯ ರಕ್ಷಣೆಗೆ ಇದು ಪೂರಕ. ಆದರೆ ಸಾವಯವ ಕೃಷಿಗೆ ಮಾನದಂಡ ನೀಡಲು ಸರಕಾರವು ಕಿಸಾನ್ ಸಂಘಗಳ ಸರ್ಟಿಫಿಕೇಟ್ ಬೇಕು ಎಂದು ಹೇಳುತ್ತಿದೆ. ಇಂತಹ ವ್ಯವಸ್ಥೆ ಸರಿಯಲ್ಲ. ಸರಕಾರವೇ ಇದನ್ನು ಪರಿಶೀಲನೆ ನಡೆಸಿ ಸರ್ಟಿಫಿಕೇಟ್ ನೀಡಬೇಕು. ನನ್ನ ಕೃಷಿಯನ್ನು ನೋಡಲೆಂದು ಕೃಷಿ ಇಲಾಖೆಯ ಅಧಿಕಾರಿಗಳು ಬಂದಿದ್ದರು. ಆ ಸಂದರ್ಭದಲ್ಲಿ ಈ ಬಗ್ಗೆ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಶ್ನಿಸಿದ್ದ ನಾನು ಅದನ್ನು ವಿರೋಧಿಸಿದ್ದೆ. ಸಾವಯವ ಕೃಷಿಯಿಂದ ಪ್ರಸ್ತುತ ರೈತರು ಆರ್ಥಿಕವಾಗಿ ಯಶಸ್ವಿಯಾಗುತ್ತಾರೆ ಎಂದು ಹೇಳುವುದು ಸಾಧ್ಯವಿಲ್ಲ. ಇಳುವರಿ ಕಡಿಮೆಯಾಗುತ್ತಿದೆ. ಆದರೆ ಆರೋಗ್ಯಕರ ಜೀವನಕ್ಕೆ ಸಾವಯವ ಕೃಷಿಯೇ ಉತ್ತಮ. ಆದರೆ ಕಳೆದ ಹಲವು ವರ್ಷಗಳಿಂದ ಹವಾಮಾನ ವೈಪರೀತ್ಯ ಇನ್ನಿತರ ಕಾರಣದಿಂದಾಗಿ ಸರಿಯಾಗಿ ಬೆಳೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಪೂರ್ಣ ಸಾವಯವವನ್ನು ನಂಬಿಕೊಂಡು ಬೆಳೆ ಬೆಳೆಸುತ್ತೇನೆ ಎನ್ನುವಂತಿಲ್ಲ.

►ಸರಕಾರ ನಿಮಗೆ ಯಾವ ರೀತಿಯಲ್ಲಿ ನೆರವಾಗುತ್ತಿದೆ?

ನಾನು ಈ ತನಕ ಸಕಾರದಿಂದ ಯಾವ ನೆರವನ್ನೂ ಪಡೆದಿಲ್ಲ. ಸಹನೆ, ತಾಳ್ಮೆ ಬೆಳೆಸಿಕೊಂಡರೆ ಕೃಷಿಕರಿಗೆ ಯಾರದೇ ನೆರವು ಬೇಕಾಗಿಲ್ಲ. ಕೃಷಿಗಾಗಿ ದುಂದು ವೆಚ್ಚವನ್ನು ಕಡಿಮೆ ಮಾಡಿದಲ್ಲಿ ಯಾರಿಗೂ ಸೋಲಾಗುವುದಿಲ್ಲ. ಕೃಷಿಗೆ ಸರಕಾರವು ವೈಜ್ಞಾನಿಕ ಧಾರಣೆ ಒದಗಿಸುವ ಬಗ್ಗೆ ಪ್ರಯತ್ನ ನಡೆಸಿದೆ ಸಾಕು. ಅದಕ್ಕಿಂತ ಉತ್ತಮ ನೆರವು ಬೇರೊಂದಿಲ್ಲ.

►ರೈತರ ಹೆಸರಲ್ಲಿ ರೈತರಲ್ಲದವರು ಸರಕಾರದ ನೆರವನ್ನು ದೋಚುತ್ತಿದ್ದಾರೆ ಎಂಬ ಆರೋಪ ಇದೆ. ನಿಜವೇ?

ಈ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸುವಂತಿಲ್ಲ. ಆರೋಪದಲ್ಲಿ ಸಾಕಷ್ಟು ನಿಜವಿದೆ. ಕೃಷಿ ಭೂಮಿಗಳು ಇದೀಗ ಉದ್ಯಮಿಗಳ ಸರಕಾಗುತ್ತಿದೆ. ಕೃಷಿಯ ಲಾಭವನ್ನು ಅವರು ಪಡೆದುಕೊಳ್ಳುತ್ತಿದ್ದಾರೆ. ಇದರೊಂದಿಗೆ ಕೃಷಿಕರು ಕೆಲಸಕ್ಕಾಗಿ ಪೇಟೆಗೆ ಹೋದರೆ ಬಂಡವಾಳಶಾಹಿಗಳು ಹಳ್ಳಿಗೆ ಬರುತ್ತಿದ್ದಾರೆ. ಕೃಷಿ ಭೂಮಿಗಳು ಸೈಟ್‌ಗಳಾಗುತ್ತಿದೆ. ಭೂಮಿ ಕಳೆದುಕೊಳ್ಳುತ್ತಿರುವ ಕೃಷಿಕರಿಗೆ ಲಾಭವಾಗುತ್ತಿಲ್ಲ. ಎಲ್ಲಾ ಲಾಭವನ್ನು ಉದ್ಯಮಿಗಳು ಪಡೆದುಕೊಳ್ಳುತ್ತಿದ್ದಾರೆ.

►ರೈತರ ಸಾಲ ಮತ್ತು ಆತ್ಮಹತ್ಯೆ ಕುರಿತು ನಿಮ್ಮ ಅಭಿಪ್ರಾಯ ಏನು?

 ರೈತರಿಗೆ ಸರಕಾರದ ಸಾಲ ಬೇಕಾಗಿಲ್ಲ. ಆತ ಬೆಳೆದ ಬೆಳೆಗೆ ಸರಿಯಾದ ಮೌಲ್ಯಾಧಾರಣೆಗಾಗಿ ವ್ಯವಸ್ಥೆ ಮಾಡಿದರೆ ಸಾಕು. ನಮ್ಮಲ್ಲಿ ಬೆಳೆಗೆ ಈಗಲೂ ಬ್ರಿಟಿಷರ ಕಾಲದ ಮೌಲ್ಯಾಧಾರಣೆ ಇದೆ. ಪ್ರತಿ ವರ್ಷಕ್ಕೊಮ್ಮೆ ವೈಜ್ಞಾನಿಕ ರೀತಿಯಲ್ಲಿ ಮೌಲ್ಯಾಧಾರಣೆ ನಿಗದಿ ಮಾಡಬೇಕು. ಖರೀದಿ ಮತ್ತು ಮಾರುಕಟ್ಟೆ ವ್ಯವಸ್ಥೆಗಳಾಗಬೇಕು. ಇಷ್ಟಾದರೆ ಸರಕಾರದ ಯಾವುದೇ ಸಾಲ ರೈತರಿಗೆ ಆವಶ್ಯಕತೆಯಿಲ್ಲ. ಕೃಷಿ ಸಾಲವನ್ನು ಕೃಷಿಗಾಗಿ ಬಳಸಿದ ರೈತ ಎಂದೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಕೃಷಿಗಾಗಿ ಸಾಲ ಪಡೆದು ಅದನ್ನು ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಬಳಸಿ ಬಳಿಕ ಸಾಲ ಕಟ್ಟಲಾಗದೆ ನೇಣಿಗೆ ಶರಣಾಗುತ್ತಾರೆ. ರೈತರು ಆಶಾವಾದಿಗಳು ಎಂದಿಗೂ ನಿರಾಶಾವಾದಿಗಳಲ್ಲ. ಒಂದು ವರ್ಷ ಬೆಳೆ ಬರದಿದ್ದಲ್ಲಿ ಇನ್ನೊಂದು ವರ್ಷ ಬರುತ್ತದೆ ಎಂಬ ನಿರೀಕ್ಷೆಯಲ್ಲಿರುತ್ತಾರೆ. ಅಂತಹವರಿಗೆ ಯಾವತ್ತೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಅನಿಸುವುದಿಲ್ಲ. ಈ ವರ್ಷ ಆಗಿರುವ ತೊಂದರೆ ಮುಂದಿನ ವರ್ಷ ಪರಿಹಾರವಾಗುತ್ತದೆ. ಹೈಟೆಕ್ ಕೃಷಿಯೂ ರೈತರಿಗೆ ಅನರ್ಥ ಮಾಡಿಸುತ್ತದೆ. ಹಿಂದೆ ಮುಂದೆ ಯೋಚಿಸಿ ಮುಂದಡಿಯಿಡುವ ರೈತನಿಗೆ ಇಂತಹ ಪರಿಸ್ಥಿತಿ ಬರುವುದಿಲ್ಲ.

►ಸರಕಾರದಿಂದ ಮತ್ತು ಸಮಾಜದಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ.

ನಾನು ಈಗಾಗಲೇ ಹೇಳಿರುವಂತೆ ಸರ್ಕಾರ ಕೃಷಿಕರ ಬೆಳೆಗೆ ಸರಿಯಾದ ಮೌಲ್ಯಾಧಾರಣೆ ನೀಡಿದಲ್ಲಿ ಅಷ್ಟೇ ಸಾಕು. ಬೇರಾವುದನ್ನೂ ನೀಡಬೇಕಾದ ಅಗತ್ಯ ಸದ್ಯಕ್ಕಿಲ್ಲ. ರೈತ ಸಂಘಟನೆಗಳು ಮಾರುಕಟ್ಟೆ ಮತ್ತು ಖರೀದಿಗಳ ಬಗ್ಗೆ ಕಾಳಜಿ ವಹಿಸಬೇಕು. ಅದೇ ರೀತಿಯಲ್ಲಿ ರೈತರೂ ಬೇಡಿಕೆಯ ಲೆಕ್ಕಾಚಾರವನ್ನು ಬದಿಗಿಟ್ಟು ಗುಣಮಟ್ಟವನ್ನು ಕಾಯ್ದುಕೊಳ್ಳವ ಕೆಲಸ ಮಾಡಬೇಕು.

►ಕೃಷಿಯಿಂದ ನೀವು ಸಂತೃಪ್ತರೆ?

 ಸಾಧಿಸುವ ಛಲವಿದ್ದರೆ ಯಾವುದರಲ್ಲೂ ಯಶಸ್ವು ಶತಸಿದ್ದ. ಪೇಟೆ ಪಟ್ಟಣವೇ ಸಾಧನೆಗೆ ಮೂಲವಲ್ಲ. ಹಳ್ಳಿಯಲ್ಲಿದ್ದರೂ ಸಾಧಿಸಬಹುದು. ನನಗೆ ಅತಿಯಾಸೆ ಇಲ್ಲ. ಕೃಷಿಯಿಂದ ನೆಮ್ಮದಿಯಾಗಿದ್ದೇನೆ. ಆರ್ಥಿಕವಾಗಿಯೂ ಸಂತೃಪ್ತನಾಗಿದ್ದೇನೆ. ಆರೋಗ್ಯ ಕುಟುಂಬ ನಮ್ಮದು.

►ನಿಮ್ಮ ಅನಂತರ ಈ ಕೃಷಿ ಮುಂದುವರಿಯಬಹುದೇ?

ಖಂಡಿತವಾಗಿ, ಹಿರಿಯರಿಂದ ಬಂದಿರುವ ಕೃಷಿಯನ್ನು ನಾನು ಮುಂದುವರಿಸಿದ್ದೇನೆ. ಇದೀಗ ನನ್ನ ಇಬ್ಬರು ಮಕ್ಕಳೂ ಕೃಷಿಯಲ್ಲಿ ಆಸಕ್ತರಾಗಿದ್ದು, ನನ್ನೊಂದಿಗೆ ಸಹಕರಿಸುತ್ತಿದ್ದಾರೆ, ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೃಷಿ ಮುಂದುವರಿಯುತ್ತದೆ ಎಂಬ ದೃಢವಾದ ನಂಬಿಕೆಯಿದೆ.

share
ಸಂಶುದ್ದೀನ್ ಸಂಪ್ಯ
ಸಂಶುದ್ದೀನ್ ಸಂಪ್ಯ
Next Story
X