ಕುಕ್ಕಾಜೆ: ಶೈನ್ ಗೈಸ್ ವತಿಯಿಂದ ರಕ್ತದಾನ ಶಿಬಿರ

ಬಂಟ್ವಾಳ, ಡಿ. 23: ಎಫ್‍ಸಿಸಿಎ ಶೈನ್ ಗೈಸ್ ಕುಕ್ಕಾಜೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ರಕ್ತದಾನ ಶಿಬಿರವು ಕುಕ್ಕಾಜೆ ಗ್ರಾಮ ಪಂಚಾಯತ್ ಭಾರತ್ ನಿರ್ಮಾಣ್ ರಾಜೀವಗಾಂಧಿ ಸೇವಾ ಕೇಂದ್ರದಲ್ಲಿ ರವಿವಾರ ನಡೆಯಿತು.
ಸೈಯದ್ ಹುಸೈನ್ ಬಾಲವಿ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನವು ಪ್ರವಾದಿ ಚರ್ಯೆಗಳಲ್ಲಿ ಒಂದಾಗಿದ್ದು, ಯುವ ಜನತೆ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಇನ್ನೊಂದು ಜೀವಕ್ಕೆ ಆಸರೆಯಾಗುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದರು.
ಮಂಚಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೋಹನ್ ದಾಸ್ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸಮಾಜಸೇವಾ ಕಾರ್ಯದ ಬಗ್ಗೆ ಶ್ಲಾಘಿಸಿದರು.
ವೇದಿಕೆಯಲ್ಲಿ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಕೆ. ಇಸ್ಮಾಯಿಲ್, ಕಾರ್ಯದರ್ಶಿ ರಫೀಕ್ ಕೆ., ಕೋಶಾಧಿಕಾರಿ ಹಸೈನಾರ್ ಪಿ.ಕೆ., ಬ್ಲಡ್ ಹೆಲ್ಪ್ ಲೈನ್ ಸ್ಥಾಪಕ ನಿಸಾರ್ ಉಳ್ಳಾಲ, ಕುಕ್ಕಾಜೆ ಫ್ರೌಢ ಶಾಲೆಯ ಅಧ್ಯಾಪಕ ಶಿವಕುಮಾರ್, ಕುಕ್ಕಾಜೆ ಜುಮಾ ಮಸೀದಿ ಮಾಜಿ ಅಧ್ಯಕ್ಷ ಕೆ. ಮೊಹಿದಿನಬ್ಬ, ಶರಫುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಝೈನುದ್ದೀನ್, ಸಾಮಾಜಿಕ ಕಾರ್ಯಕರ್ತ ಆಶಿಕ್ ಕುಕ್ಕಾಜೆ, ಶೈನ್ ಗೈಸ್ ಅಧ್ಯಕ್ಷ ಗಫಾರ್ ಸಾಗರ್, ಮಾಜಿ ಅಧ್ಯಕ್ಷ ಇಬ್ರಾಹಿಂ ಎ.ಕೆ., ಸಾಮಾಜಿಕ ಕಾರ್ಯಕರ್ತ ಫೈಝಲ್ ಮಂಚಿ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ತಲಪಾಡಿ, ಮಾರ್ನಬೈಲು ಮೆಲ್ಕಾರ್ ಮಹಿಳಾ ಡಿಗ್ರಿ ಕಾಲೇಜ್ ಸಹ ಪ್ರಾಧ್ಯಾಪಕ ಎಂ.ಡಿ.ಮಂಚಿ, ಬ್ಲಡ್ ಹೆಲ್ಪ್‍ಲೈನ್ ನಿರ್ವಾಹಕ ಇಮ್ರಾನ್ ಮದಕ, ಶೈನ್ ಗೈಸ್ ಗೌರವಾಧ್ಯಕ್ಷ ನಝೀರ್, ಉದ್ಯಮಿ ರವಿ ಮಂಚಿ, ಕುಕ್ಕಾಜೆ ಯುವಕ ಮಂಡಲ ಅಧ್ಯಕ್ಷ ರಾಜೇಶ್, ಎಫ್.ಸಿ.ಸಿ.ಎ. ಶೈನ್ ಗೈಸ್ ಕುಕ್ಕಾಜೆ ಉಪಸ್ಥಿತರಿದ್ದರು.
ಬ್ಲಡ್ ಹೆಲ್ಪ್ ಲೈನ್‍ನ ಗೌರವಾಧ್ಯಕ್ಷ ನಝೀರ್ ಸ್ವಾಗತಿಸಿ, ವಂದಿಸಿದರು.







