ಕ್ರೀಡೆಯಲ್ಲಿ ಹೊಸ ಅನ್ವೇಷಣೆಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ: ಶಾಸಕ ಲಾಲಾಜಿ

ಪಡುಬಿದ್ರಿ, ಡಿ. 23: ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳಲ್ಲಿ ಹೊಸ ಅನ್ವೇಷಣೆಗಳು ನಡೆಯುತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶಾಸಕ ಲಾಲಾಜಿ ಮೆಂಡನ್ ಹೇಳಿದರು.
ಅವರು ಶನಿವಾರ ಪಡುಬಿದ್ರಿಯ ಬ್ಯಾಡ್ಮಿಂಟ್ ಕ್ಲಬ್ ಆಯೋಜಿಸಿದ ಪಡುಬಿದ್ರಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್-2018ನ್ನು ಉದ್ಘಾಟಿಸಿ ಮಾತನಾಡಿದರು.
ಬ್ಯಾಡ್ಮಿಂಟನ್ ಕ್ಲಬ್‍ನ ಅಧ್ಯಕ್ಷ ವೈ. ಸುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪಡುಬಿದ್ರಿ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ವೈ. ಸುಧೀರ್, ಎಸ್.ಪಿ.ಫಯಾಝ್, ಶರತ್ ಶೆಟ್ಟಿ, ವಿವಿಧ ತಂಡಗಳ ಮಾಲಕರಾದ ಡಾ.ಪ್ರಶಾಂತ್ ಶೆಟ್ಟಿ ಕಾಪು, ನವೀನ್‍ಚಂದ್ರ ಜೆ.ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಯ್ಯದ್ದಿ, ಪ್ರಶಾಂತ್ ಎರ್ಮಾಳು, ವೈ ದಾಮೋದರ, ಶಂಕರ್ ಕಂಚಿನಡ್ಕ, ಉಪಾಧ್ಯಕ್ಷ ವಿಜಯ್ ಆಚಾರ್ಯ, ಪಂದ್ಯಾಕೂಟದ ಆಯೋಜಕರಾದ ಮಿನ್ನ ಶರೀಫ್, ಪ್ರದೀಪ್ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯದರ್ಸಿ ರಮೀಝ್ ಹುಸೈನ್ ಕಾರ್ಯಕ್ರಮ ನಡೆಸಿದರು.
Next Story





