ಅಲ್ ಮದೀನ ಮಂಜನಾಡಿ: ಚಿತ್ರದುರ್ಗಾದಲ್ಲಿ ಬೆಳ್ಳಿ ಹಬ್ಬದ ಪ್ರಚಾರ
ಮಂಗಳೂರು, ಡಿ. 23: ಅಲ್ ಮದೀನ ಬೆಳ್ಳಿ ಹಬ್ಬ ಮಹಾ ಸಮ್ಮೇಳನದ ಅಂಗವಾಗಿ ಉತ್ತರ ಕರ್ನಾಟಕದಲ್ಲಿ ಇಕ್ರಾಂ ಯಾತ್ರೆ ಹಮ್ಮಿಕೊಂಡಿದ್ದು, ಡಿ. 24ರಂದು ರಾತ್ರಿ ಚಿತ್ರ ದುರ್ಗಾದ ಅಝಾದ್ ನಗರದಲ್ಲಿ ಜಿಲ್ಲಾ ಸುನ್ನೀ ನಾಯಕರಾದ ಆದಂ ಸಖಾಫಿ ಮುಖ್ಯಪ್ರಭಾಷಣ ಮಾಡಲಿರುವರು.
ಸಂಸ್ಥೆಯ ಸಾಮಾಜಿಕ ಸೇವೆಗಳ ಬಗ್ಗೆ ಅಲ್ ಮದೀನ ವಿದ್ಯಾರ್ಥಿ ನೌಫಲ್ ಮಲಾರ್ ಮಂಡಿಸಲಿರುವರು. ಚಿತ್ರದುರ್ಗ ಇಹ್ಸಾನ್ ಮದ್ರಸದ ಪ್ರಾಧ್ಯಾಪಕರಾದ ಎಂ ಎಸ್ ಎಂ ಜುನೈದ್ ಸಖಾಫಿ, ಅಬ್ದುಲ್ ಖಾದರ್ ಸಖಾಫಿ, ಅಲ್ ಮದೀನ ದಅ್ ವಾ ಕಾಲೇಜು ವಿದ್ಯಾರ್ಥಿಗಳಾದ ಜುನೈದ್ ಟಿ ಇರಾ, ಲಿಬಾನ್ ಕೆ ಸಿ ರೋಡ್, ಅಶ್ರಫ್ ಕನ್ಯಾನ, ಸಹದ್ ಮೋಂಟುಗೋಳಿ ಹಾಗು ಇನ್ನಿತರರು ಭಾಗವಹಿಸಲಿದ್ದಾರೆ.
Next Story





