ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಡಿ.26ಕ್ಕೆ ಒಂದು ದಿನ ಮುಷ್ಕರ
ಮುಂಬೈ, ಡಿ.23: ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್‌ನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸುವ ಪ್ರಸ್ತಾವವನ್ನು ಖಂಡಿಸಿ 9 ಬ್ಯಾಂಕ್ ಸಂಘಟನೆಗಳು ಡಿ.26 ರಂದು ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದೆ.
ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್‌ನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಲಾಗುವುದು ಎಂದು ಕೇಂದ್ರ ಸರಕಾರ ಸೆಪ್ಟಂಬರ್‌ನಲ್ಲಿ ಘೋಷಿಸಿತ್ತು.
"ಬ್ಯಾಂಕ್ ಅಥವಾ ಬ್ಯಾಂಕ್ ಗ್ರಾಹಕರ ಹಿತದೃಷ್ಟಿಯಿಂದ ಬ್ಯಾಂಕ್‌ಗಳನ್ನು ವಿಲೀನಗೊಳಿಸುತ್ತಿಲ್ಲ. ಇದರಿಂದ ಇಬ್ಬರಿಗೂ ಹಾನಿಯೇ ಹೆಚ್ಚು’’ ಎಂದು ಬ್ಯಾಂಕ್ ಯೂನಿಯನ್‌ಗಳ ಯುನೈಟೆಡ್ ಫಾರಮ್ ಹೇಳಿದೆ.
ಬುಧವಾರದ ಮುಷ್ಕರದಲ್ಲಿ ಸುಮಾರು 1 ಮಿಲಿಯನ್ ಬ್ಯಾಂಕ್ ಉದ್ಯೋಗಿಗಳು ಪಾಲ್ಗೊಳ್ಳಲಿದ್ದಾರೆ.
ಡಿ.26 ರಂದು ಯೂನಿಯನ್‌ಗಳು ದಕ್ಷಿಣ ಮುಂಬೈನ ಆಝಾದ್ ಮೈದಾನದಲ್ಲಿ ದೊಡ್ಡ ರ್ಯಾಲಿ ಆಯೋಜಿಸಿವೆ. ಈಗಾಗಲೇ ಡಿ.21 ರಂದು ವಿವಿಧ ಬ್ಯಾಂಕ್‌ಗಳ 3.20 ಲಕ್ಷ ಉದ್ಯೋಗಿಗಳು ತಕ್ಷಣವೇ ವೇತನ ಪರಷ್ಕ್ರರಣೆ ಹಾಗೂ ಪ್ರಸ್ತಾವಿತ ಬ್ಯಾಂಕ್ ವಿಲೀನ ಖಂಡಿಸಿ ಒಂದು ದಿನದ ಮುಷ್ಕರ ನಡೆಸಿವೆ.