ಸಿಎಂ ಕುಮಾರಸ್ವಾಮಿ, ಸಚಿವರಿಗೆ ಬಿ.ಎ. ಮೊಹಿದೀನ್ ಆತ್ಮ ಕಥನ ಹಂಚಿದ ಐವನ್ ಡಿಸೋಜ

ಮಂಗಳೂರು, ಡಿ. 23: ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ವಿಧಾನ ಮಂಡಲ ಅಧಿವೇಶನ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಹಿರಿಯ ಮುತ್ಸದ್ದಿ ಬಿ.ಎ. ಮೊಹಿದೀನ್ ಅವರ ಆತ್ಮ ಕಥನ "ನನ್ನೊಳಗಿನ ನಾನು" ಕೃತಿಯನ್ನು ಮುಖ್ಯಮಂತ್ರಿ ಕುಮಾರ ಸ್ವಾಮಿ ಸಹಿತ ಸಚಿವರು ಹಾಗೂ ಶಾಸಕರುಗಳಿಗೆ ನೀಡಿದರು.
ಪ್ರಕಾಶಕರಿಂದ ಕೃತಿಯ 300 ಪ್ರತಿಗಳನ್ನು ಖರೀದಿಸಿದ ಐವನ್ ಡಿಸೋಜ, ತನ್ನ ರಾಜಕೀಯ ಗುರುವಿನ ಆತ್ಮ ಕಥನವನ್ನು ಮುಖ್ಯಮಂತ್ರಿ ಕುಮಾರ ಸ್ವಾಮಿ, ವಿಧಾನ ಪರಿಷತ್ತಿನ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಸಚಿವೆ ಜಯಮಾಲ ಸಹಿತ ಸಚಿವರು, ಶಾಸಕರುಗಳಿಗೆ ಹಂಚುವುದರ ಮೂಲಕ ಬಿ.ಎ. ಮೊಹಿದೀನ್‌ರನ್ನು ಸ್ಮರಿಸಿಕೊಂಡರು.
ಮುಖ್ಯಮಂತ್ರಿ ಸಹಿತ ಎಲ್ಲರೂ ಐವನ್‌ರ ಈ ಕೊಡುಗೆಯನ್ನು ಸ್ವೀಕರಿಸಿ ಸ್ವಚ್ಛ ಚಾರಿತ್ರ್ಯದ, ಜಾತ್ಯಾತೀತ ವ್ಯಕ್ತಿತ್ವದ, ಅಪರೂಪ ರಾಜಕಾರಣಿ ಬಿ.ಎ. ಮೊಯಿದೀನ್‌ರ ಬದುಕನ್ನು ನೆನಪಿಸಿಕೊಂಡರು ಎಂದು ಐವನ್ ಡಿಸೋಜ ತಿಳಿಸಿದರು.
Next Story