Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸಿಕ್ಕಿದ ಉದ್ಯೋಗ ತೊರೆದು ಕೃಷಿಯಲ್ಲಿ...

ಸಿಕ್ಕಿದ ಉದ್ಯೋಗ ತೊರೆದು ಕೃಷಿಯಲ್ಲಿ ಯಶಸ್ವಿಯಾದ ಯುವ ರೈತ ಸತೀಶ್ ಹೆಗ್ಡೆ

ವಾರ್ತಾಭಾರತಿವಾರ್ತಾಭಾರತಿ23 Dec 2018 4:06 PM IST
share
ಸಿಕ್ಕಿದ ಉದ್ಯೋಗ ತೊರೆದು ಕೃಷಿಯಲ್ಲಿ ಯಶಸ್ವಿಯಾದ ಯುವ ರೈತ ಸತೀಶ್ ಹೆಗ್ಡೆ

ಇಂದು ಕಿಸಾನ್ ದಿನ: ಈ ಹಿನ್ನೆಲೆಯಲ್ಲಿ ನಾಡಿನ ವಿವಿಧ ರೈತರನ್ನು ಪತ್ರಿಕೆ ಸಂದರ್ಶನ ಮಾಡಿದೆ. ಅವರ ಸಾಧನೆ, ಕೃಷಿಯ ಅನುಭವಗಳು, ಎದುರಿಸುತ್ತಿರುವ ಸವಾಲು, ಕೃಷಿಯ ಮೂಲಕ ಅವರು ಕಟ್ಟಿಕೊಂಡಿರುವ ಬದುಕನ್ನು ರೈತರು ಹಂಚಿಕೊಂಡಿದ್ದಾರೆ.

ಕೇವಲ ಹತ್ತು ವರ್ಷಗಳ ಹಿಂದಷ್ಟೇ ಕೃಷಿಯತ್ತ ಆಕರ್ಷಿತರಾದ ಅಮಾಸೆಬೈಲು ಗ್ರಾಮದ ರಟ್ಟಾಡಿಯ ಸತೀಶ್ ಹೆಗ್ಡೆ ಇಂದು ತಮ್ಮ ಪ್ರಯೋಗ ಶೀಲತೆ, ವೈಜ್ಞಾನಿಕ ಹಾಗೂ ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಈ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಯುವ ಜನಾಂಗ ಕೃಷಿಯಿಂದ ವಿಮುಖವಾಗುತ್ತಿರುವ ಇಂದಿನ ದಿನಗಳಲ್ಲಿ ಕೃಷಿಯನ್ನು ಅಪ್ಪಿಕೊಂಡು ಅದರಲ್ಲಿ ಯಶಸ್ಸನ್ನು ಕಂಡ ಯುವ ತಲೆಮಾರಿಗೆ ಇವರೊಂದು ಉದಾಹರಣೆ ಯಾಗುತ್ತಾರೆ.

ಪಿಯುಸಿ ಬಳಿಕ ಇಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ ಮಾಡಿದ 38ರ ಹರೆಯದ ಸತೀಶ್ ಹೆಗ್ಡೆ, ಅನಿವಾರ್ಯವಾಗಿ ಕೃಷಿಗೆ ಇಳಿದು ರಟ್ಟಾಡಿಯಲ್ಲಿದ್ದ ಮೂರು ಎಕರೆ ಜಮೀನಿನೊಂದಿಗೆ ಅಮಾಸೆಬೈಲು ಕೆಳಾಸಂಕದಲ್ಲಿ 4.5 ಎಕರೆ ಬರಡು ನೆಲವನ್ನು ಖರೀದಿಸಿ ತನ್ನ ಪರಿಶ್ರಮದಿಂದ ಅದನ್ನಿಂದು ಹಸಿರು ವನವನ್ನಾಗಿ ಪರಿವರ್ತಿಸಿದ್ದಾರೆ. ಇವರು ಹತ್ತಾರು ಜಾತಿಯ 4,000ಕ್ಕೂ ಅಧಿಕ ಅಡಿಕೆ ಮರಗಳೊಂದಿಗೆ ಪಪ್ಪಾಯಿ ಕೃಷಿಯನ್ನು ವ್ಯಾಪಕವಾಗಿ ಮಾಡುತ್ತಿದ್ದಾರೆ. ಒಂದು ಎಕರೆ ಪ್ರದೇಶದಲ್ಲಿ ಶ್ರೀಪದ್ಧತಿಯಲ್ಲಿ ಭತ್ತವನ್ನು ಬೆಳೆಯುತ್ತಿರುವ ಇವರು, 300 ತೆಂಗು, ಬಾಳೆ, ಗೇರು, ಕಾಳುಮೆಣಸು ಬೆಳೆಯುತ್ತಿದ್ದಾರೆ.

ಅಲ್ಲದೇ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಸಿಹಿ ನೀರು ಮೀನುಗಾರಿಕೆಯನ್ನು ಕೈಗೊಂಡಿದ್ದಾರೆ. ಇಲ್ಲಿ ಮೀನುಸಾಕಣೆ ಮಾಡದೇ ಮೀನು ಮರಿಗಳನ್ನು ಬೆಳೆಸಿ ಮಾರಾಟ ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಹೈನುಗಾರಿಕೆ, ನಾಟಿ ಕೋಳಿ ಸಾಕಣೆಯನ್ನೂ ಪೂರಕವಾಗಿ ಮಾಡುತ್ತಿದ್ದಾರೆ. ಇದರೊಂದಿಗೆ ತೋಟದ ಅಭಿವೃದ್ಧಿಗೆ ಪರಾಗಸ್ಪರ್ಶಕ್ಕಾಗಿ ಜೇನು ಸಾಕಣೆಯನ್ನೂ ಇದೀಗ ಪ್ರಾರಂಭಿಸಿದ್ದಾರೆ. ಈ ಮೂಲಕ ಇವರು ಏಕರೂಪಿ ಕೃಷಿಗೆ ಮುಂದಾಗದೇ ಬಹುವಿಧ ಕೃಷಿಗೆ ಆರಂಭದಲ್ಲೇ ಇಳಿದು ಯಶಸ್ಸು ಕಂಡಿದ್ದಾರೆ. ಇಂದು ರೈತರು ಯಶಸ್ವಿಯಾಗಬೇಕಿದ್ದರೆ ಏಕ ಬೆಳೆಗೆ ಸೀಮಿತಗೊಳ್ಳದೇ ಬಹುಬೆಳೆಯನ್ನು ಅವಲಂಬಿಸಬೇಕು ಎಂದು ಖಚಿತವಾಗಿ ನುಡಿಯುತ್ತಾರೆ.

ಕೃಷಿಕನಾಗಿ ಒಂದು ದಶಕದಲ್ಲೇ ಸಾಕಷ್ಟು ಪ್ರಗತಿ ಸಾಧಿಸಿ, ಹಲವಾರು ಪ್ರಶಸ್ತಿಗಳನ್ನೂ ಗೆದ್ದಿರುವ ಸತೀಶ್ ಹೆಗ್ಡೆಯವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

► ನೀವು ಮಾಡುತ್ತಿರುವ ಪ್ರಮುಖ ಕೃಷಿ ಯಾವುದು? ಎಷ್ಟು ಸಮಯದಿಂದ ಮಾಡುತ್ತಿದ್ದೀರಿ? ಇದು ನಿಮ್ಮ ಬದುಕಿಗೆ ಎಷ್ಟರ ಮಟ್ಟಿಗೆ ಪ್ರಯೋಜನಕಾರಿ, ಲಾಭದಾಯಕವಾಗಿದೆ?

ನನ್ನ ಪ್ರಮುಖ ಕೃಷಿ ಅಡಿಕೆ ಮತ್ತು ಪಪ್ಪಾಯಿ. ಇದರೊಂದಿಗೆ ತೆಂಗು, ಗೇರು, ಬಾಳೆ, ಕಾಳುಮೆಣಸನ್ನು ಬೆಳೆಯುತಿದ್ದೇನೆ. ಅಲ್ಲದೇ ಈ ಭಾಗದಲ್ಲಿ ಪ್ರಥಮವಾಗಿ ಸಿಹಿ ನೀರು ಮೀನುಗಾರಿಕೆಯಲ್ಲಿ ಮೀನಿನ ಮರಿಗಳನ್ನು ಬೆಳೆಸಿ ಮಾರಾಟ ಮಾಡುತಿದ್ದೇನೆ. ಸಾಂಪ್ರದಾಯಿಕ ಹೈನುಗಾರಿಕೆ, ನಾಟಿಕೋಳಿ ಸಾಕಾಣಿಕೆ ಹಾಗೂ ಅಲ್ಪಸ್ವಲ್ಪ ಜೇನು ಸಾಕಣೆೆಗೂ ಕೈಹಾಕಿದ್ದೇನೆ.

► ಕೃಷಿಯನ್ನೇ ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣವೇನು?

ಡಿಪ್ಲೊಮಾ ವಿದ್ಯಾಭ್ಯಾಸದ ಬಳಿಕ ನನಗೆ ಉದ್ಯೋಗವೂ ದೊರಕಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ನಾನು ಮನೆಗೆ ಬಂದು ಕೃಷಿಯನ್ನೇ ನನ್ನ ಬದುಕಿಗೆ ಆಯ್ಕೆ ಮಾಡಿಕೊಳ್ಳಬೇಕಾಯಿತು. ಆದರೆ ನಾನು ಕಲಿಯುತಿರು ವಾಗಲೇ ಎ.ಜಿ.ಕೊಡ್ಗಿ ಅವರ ಕೃಷಿಯನ್ನು ನೋಡಿ ಪ್ರಭಾವಿತನಾಗಿದ್ದೆ. ಅಲ್ಲದೇ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಕೃಷಿಯ ಕುರಿತು ಮಾಡಿದ ಭಾಷಣದ ಬಳಿಕ ನಾನು ಪೂರ್ಣಕಾಲಿಕ ಕೃಷಿಕನಾಗಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನೀಡಿದ ಮಾರ್ಗದರ್ಶನವನ್ನು ನಾನೆಂದೂ ಮರೆಯಲಾರೆ.

► ಆರಂಭದಲ್ಲಿ ನೀವು ಎದುರಿಸಿದ ಸವಾಲುಗಳು ಏನೇನು? ಇದರ ಸೊೀಲು ಗೆಲುವುಗಳನ್ನು ಹಂಚಿ ಕೊಳ್ಳಿ.

ಪ್ರಾರಂಭದಲ್ಲಿ ನನಗೆ ನೀರಿನ ಸಮಸ್ಯೆ, ಆರ್ಥಿಕ ಅಡಚಣೆಗಳೆಲ್ಲವೂ ಎದುರಾಗಿದ್ದವು.ಆದರೆ ಬ್ಯಾಂಕ್, ಇಲ್ಲಿನ ಸಹಕಾರಿ ಸೊಸೈಟಿ ಹಾಗೂ ವಿಶೇಷತ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಕೃಷಿ ಅಭ್ಯುದಯ ಯೋಜನೆಗಳು ನನ್ನ ಕೈ ಹಿಡಿದು ಕೃಷಿಯನ್ನು ನಾನು ಚೇತರಿಸಿಕೊಳ್ಳಲು ನೆರವಾದವು.

► ಸಾವಯವ ಗೊಬ್ಬರಗಳನ್ನು ಬಳಸಿ ಮಾಡುವ ಕೃಷಿ ಕುರಿತು ನಿಮ್ಮ ಅನಿಸಿಕೆ? ಇದರಿಂದ ರೈತ ಯಶಸ್ವಿಯಾಗಬಹುದೇ? 

ಸಾವಯವ ಕೃಷಿ ಅತ್ಯುತ್ತಮ ಎಂಬುದು ನನ್ನ ಅಭಿಪ್ರಾಯ. ನಾನಂತೂ ಸಾವಯವವನ್ನೇ ಹೆಚ್ಚಾಗಿ ಬಳಸುತ್ತಿದ್ದೇನೆ. ಹೈನುಗಾರಿಕೆಯನ್ನು ಮಾಡುವುದರಿಂದ ಸಿಗುವ ದನದ ಗೊಬ್ಬರದೊಂದಿಗೆ ಕೋಳಿ ಗೊಬ್ಬರ ಹಾಗೂ ಪಕ್ಕದ ಮನೆಯ ಕುರಿ ಗೊಬ್ಬರವನ್ನೂ ನಾನು ಬಳಸುತ್ತಿದ್ದೇನೆ. ಇದರಿಂದ ಖಂಡಿತ ಯಶಸ್ಸು ಪಡೆಯಲು ಸಾಧ್ಯ ಎಂಬುದು ನನ್ನ ಅಭಿಪ್ರಾಯ. ಇದರೊಂದಿಗೆ ನಾನು ಪರಾಗಸ್ಪರ್ಶಕ್ಕಾಗಿ ಜೇನು ಕೃಷಿಯನ್ನು ಮಾಡುತ್ತಿದ್ದೇನೆ. ಇದು ಸಹ ನನಗೆ ಒಳ್ಳೆಯ ನೆರವಾಗುತ್ತಿದೆ.

► ಸರಕಾರ ನಿಮಗೆ ಯಾವ ರೀತಿಯಲ್ಲಿ ನೆರವಾಗುತ್ತಿದೆ?

ಆರಂಭದಲ್ಲಿ ಇಲ್ಲದಿದ್ದರೂ ಈಗ ತೋಟಗಾರಿಕೆ ಇಲಾಖೆ ನನಗೆ ಸಹಾಯ ಮಾಡಲು ಮುಂದೆ ಬಂದಿದೆ. ನಾನು ಬಳಸುತ್ತಿದ್ದ ಸ್ಪ್ರಿಂಕ್ಲರ್ ಬದಲು ಹೊಸ ಆವಿಷ್ಕಾರವಾದ ಡ್ರಿಪ್ ನೀರಾವರಿ ಬಳಸಲು ಸಹಾಯ ಮಾಡುತ್ತಿದ್ದೆ. ಇದಲ್ಲದೇ ಕೃಷಿ ಅಭ್ಯುದಯ ಯೋಜನೆಯ ನೆರವನ್ನೂ ನಾನು ಪಡೆದಿದ್ದೇನೆ.

► ರೈತರ ಹೆಸರಲ್ಲಿ ರೈತರಲ್ಲದವರು ಸರಕಾರದ ನೆರವನ್ನು ದೋಚುತ್ತಿದ್ದಾರೆ ಎಂಬ ಆರೋಪ ಇದೆ. ನಿಜವೇ?

ರೈತರ ಆತ್ಮಹತ್ಯೆ ಖಂಡಿತ ತಪ್ಪು. ರೈತರು ಒಂದೇ ಬೆಳೆ ಬೆಳೆದು ಅದರಿಂದ ನಷ್ಟವಾದರೆ, ಪಡೆದ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಬದಲು ಮಿಶ್ರ ಬೆಳೆ ಬೆಳೆಯಬೇಕು. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಣೆ, ಜೇನು ಸಾಕಣೆೆ, ಮೀನು ಸಾಕಣೆಯಲ್ಲಿ ಯಾವುದನ್ನಾದರೂ ಕೈಗೊಳ್ಳಬಹುದು. ಇದರೊಂದಿಗೆ ಈಗ ಸರಕಾರದ ನೀತಿಗಳು ರೈತರಿಗೆ ಮಾರಕವಾಗುತ್ತಿವೆ. ಹೆಚ್ಚಿನ ಕಡೆಗಳಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ಕೃಷಿ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಸಣ್ಣ ರೈತರಿಗೆ ಮಾರಕವಾಗುತ್ತಿದೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ರೈತರ ಆತ್ಮಹತ್ಯೆಗೆ ಪ್ರಮುಖ ಕಾರಣ ಎಂದು ನಾನು ಭಾವಿಸುತ್ತೇನೆ.

► ರೈತರ ಸಾಲ ಮತ್ತು ಆತ್ಮಹತ್ಯೆ ಕುರಿತು ನಿಮ್ಮ ಅಭಿಪ್ರಾಯ ಏನು?

ಇಂದು ಸರಕಾರ ತಮ್ಮ ಬೆಂಬಲಕ್ಕೆ ನಿಲ್ಲಬೇಕೆಂದು ರೈತರು ಅಪೇಕ್ಷಿಸುತ್ತಾರೆ. ರೈತರ ಬೆಳೆಗೆ ಉತ್ತಮ ಬೆಂಬಲ ಬೆಲೆ, ಆಧುನಿಕ ತಂತ್ರಜ್ಞಾನ ಸುಲಭವಾಗಿ ಸಿಗುವಂತೆ ಮಾಡುವುದು, ರೈತರಿಗೆ ನೀರಾವರಿಯ ಮೂಲಭೂತ ಸೌಲಭ್ಯ ದೊರಕಿಕೊಡುವುದನ್ನು ಸರಕಾರಗಳು ಮಾಡಬಹುದು.

► ಸರಕಾರದಿಂದ ಮತ್ತು ಸಮಾಜದಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ.

ಸಮಾಜವೂ ರೈತ ಬೆಳೆದ ಉತ್ಪನ್ನಗಳನ್ನು ಖರೀದಿಸಬೇಕು. ಇಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕು. ಅಲ್ಲದೇ ಪ್ರತಿ ಗ್ರಾಪಂ ಮಟ್ಟದಲ್ಲಾದರೂ ರೈತರು ಬೆಳೆದ ಬೆಳೆಗಳನ್ನು ಸಂರಕ್ಷಿಸಲು ಶೀತಲೀಕರಣ ಸೌಲಭ್ಯ ಒದಗಿಸಬೇಕು. ಇದರಿಂದ ನಾನು ಬೆಳೆದ ಪಪ್ಪಾಯಿ, ಮಾವಿನಂಥ ಹಣ್ಣುಗಳನ್ನು ದೀರ್ಘಕಾಲ ಕಾಪಿಡಲು ಸಾಧ್ಯವಾಗುತ್ತದೆ.

► ಕೃಷಿಯಿಂದ ನೀವು ಸಂತೃಪ್ತರೆ?

ಕೃಷಿಯಿಂದ ನನಗೆ ಸಂಪೂರ್ಣ ತೃಪ್ತಿಯಿಂದ. ಆರ್ಥಿಕವಾಗಿ ನಾನೀಗ ಸುಧಾರಿಸುತಿದ್ದೇನೆ. ಯಾರ ಹಂಗಿಲ್ಲದೇ ಕಷ್ಚಪಟ್ಟು ದುಡಿದು ತಿನ್ನುವ ಖುಷಿ ಇದೆ. ಕೆಲವೊಮ್ಮೆ ಸಮಸ್ಯೆಗಳು ಎದುರಾದರೂ ಅವುಗಳಿಗೆ ಪರಿಹಾರವೂ ಇದೆ.

► ನಿಮ್ಮ ಅನಂತರ ಈ ಕೃಷಿ ಮುಂದುವರಿಯಬಹುದೇ?

ಕೃಷಿ ಮುಂದುವರಿಯಲು, ಇದು ಲಾಭದಾಯಕವಾಗಿರುವುದು ಮುಖ್ಯ. ಇದಕ್ಕಾಗಿ ಸರಕಾರದ ಸಹಾಯ ಅಗತ್ಯವಿದೆ. ಸರಕಾರದ ಸೌಲಭ್ಯಗಳು ನೇರವಾಗಿ ರೈತನಿಗೆ ದೊರೆಯಬೇಕು. ಇದಕ್ಕಿಂತ ಮೊದಲು ರೈತರನ್ನು ಕಾಡುವ ಅತೀ ದೊಡ್ಡ ಸಮಸ್ಯೆ ಕಾಡುಪ್ರಾಣಿಗಳ ಹಾವಳಿ. ಇದನ್ನು ಪರಿಹರಿಸಲು ಸರಕಾರ ಮೊದಲ ಆದ್ಯತೆ ನೀಡಬೇಕು. ಇದಕ್ಕಾಗಿ ನಾನು ತಂತಿಬೇಲಿ ಅಳವಡಿಸುತಿದ್ದೇನೆ. ಆದರೆ ಇದಕ್ಕೆ ದೊಡ್ಡ ಮೊತ್ತದ ಬಂಡವಾಳ ಬೇಕಾಗುತ್ತದೆ. ಸಕಾರ ಇದಕ್ಕೆ ಮುಂದೆ ಬರಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X