ನನ್ನ ಹೇಳಿಕೆಗಳನ್ನು ಕೆಲ ಮಾಧ್ಯಮಗಳು ತಿರುಚುತ್ತಿವೆ: ನಿತಿನ್ ಗಡ್ಕರಿ ಆರೋಪ
![ನನ್ನ ಹೇಳಿಕೆಗಳನ್ನು ಕೆಲ ಮಾಧ್ಯಮಗಳು ತಿರುಚುತ್ತಿವೆ: ನಿತಿನ್ ಗಡ್ಕರಿ ಆರೋಪ ನನ್ನ ಹೇಳಿಕೆಗಳನ್ನು ಕೆಲ ಮಾಧ್ಯಮಗಳು ತಿರುಚುತ್ತಿವೆ: ನಿತಿನ್ ಗಡ್ಕರಿ ಆರೋಪ](https://www.varthabharati.in/sites/default/files/images/articles/2018/12/23/169360.jpg)
ಹೊಸದಿಲ್ಲಿ, ಡಿ.23: ಪಕ್ಷದ ನಾಯಕತ್ವ ಮತ್ತು ತನ್ನ ನಡುವೆ ಬಿರುಕು ಮೂಡಿಸಲು ‘ಪಿತೂರಿ’ ನಡೆಯುತ್ತಿದೆ ಎಂದು ಬಿಜೆಪಿ ನಾಯಕ ನಿತಿನ್ ಗಡ್ಕರಿ ಆರೋಪಿಸಿದ್ದಾರೆ. ವಿಪಕ್ಷಗಳು ಮತ್ತು ಕೆಲ ಮಾಧ್ಯಮಗಳು ತನ್ನ ಹೇಳಿಕೆಗಳನ್ನು ತಿರುಚಿ ಕೆಟ್ಟ ಪ್ರಚಾರ ನಡೆಸುತ್ತಿದೆ ಎಂದವರು ಹೇಳಿದ್ದಾರೆ.
“ಕೆಲ ವಿರೋಧ ಪಕ್ಷಗಳು ಮತ್ತು ಕೆಲ ಮಾಧ್ಯಮಗಳು ನನ್ನ ಹೇಳಿಕೆಗಳನ್ನು ತಿರುಚುತ್ತಿರುವುದು ಮತ್ತು ಅದನ್ನು ನನ್ನ ಹಾಗು ಪಕ್ಷವನ್ನು ಹಳಿಯಲು ಬಳಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ” ಎಂದು ಗಡ್ಕರಿ ಹೇಳಿದರು.
ನಾಯಕತ್ವ ವಹಿಸಿಕೊಂಡವರು ಸೋಲು ಮತ್ತು ಗೆಲುವನ್ನು ಸ್ವೀಕರಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಈ ಮೊದಲು ಗಡ್ಕರಿ ಹೇಳಿದ್ದರು.
Next Story