ಮುಕ್ಕಚ್ಚೇರಿ: ತಾಜುಲ್ ಉಲಮಾ ಅನುಸ್ಮರಣೆ
ಉಳ್ಳಾಲ, ಡಿ.23: ಮುಕ್ಕಚೇರಿಯ ಅಲ್ ಮದ್ರಸತುಲ್ ಮುಬಾರಕ್ ವತಿಯಿಂದ ಮಾಸಂಪ್ರತಿ ನಡೆಸುವ ಮದನಿ ಮೌಲಿದ್ ಮತ್ತು ತಾಜುಲ್ ಉಲಮಾ ಸೈಯದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ಉಳ್ಳಾಲ ತಂಙಳ್‌ರ ಅನುಸ್ಮರಣಾ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಮದ್ರಸದ ಮುಖ್ಯ ಶಿಕ್ಷಕ ಎಂ.ಎ. ಇಸ್ಮಾಈಲ್ ನಈಮಿ ಮಂಗಳಪೇಟೆ ಅನುಸ್ಮರಣಾ ಭಾಷಣ ಮಾಡಿದರು.
ಕಳೆದ ವರ್ಷ ಪಬ್ಲಿಕ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಐದು, ಏಳು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಅಧ್ಯಾಪಕ ಅಬ್ಬಾಸ್ ಮದನಿ ಅಳೇಕಲ ದುಆ ನೆರವೇರಿಸಿದರು. ಮುಕ್ಕಚ್ಚೇರಿ ಜುಮಾ ಮಸೀದಿಯ ಉಪಾಧ್ಯಕ್ಷ ಯು.ಡಿ.ಮುಹಮ್ಮದ್ ಹಾಜಿ, ಮಾಜಿ ಅಧ್ಯಕ್ಷ ಕೋಯಾ ಹಾಜಿ, ಪ್ರಧಾನ ಕಾರ್ಯದರ್ಶಿ ಹೈದರ್ ಮುಕ್ಕಚ್ಚೇರಿ, ಅಧ್ಯಾಪಕ ಅಬ್ದುಲ್ ಅಝೀಝ್ ಮದನಿ ಮಲಾರ್, ಹಂಝ ಮದನಿ ಹಳೆಕೋಟೆ,ಕರೀಮ್ ಮುಸ್ಲಿಯಾರ್ ಮುಕ್ಕಚ್ಚೇರಿ ಉಪಸ್ಥಿತರಿದ್ದರು.
Next Story