ಶೆಫರ್ಡ್ಸ್ ಇಂಟರ್ ನ್ಯಾಷನಲ್ ಅಕಾಡಮಿಯಿಂದ ವಾರ್ಷಿಕ ಕ್ರೀಡಾ ದಿನಾಚರಣೆ

ಮಂಗಳೂರು, ಡಿ. 23: ಇಲ್ಲಿಯ ಶೆಫರ್ಡ್ಸ್ ಇಂಟರ್ ನ್ಯಾಷನಲ್ ಅಕಾಡಮಿ (ಹಿಕ್ಮಾಹ್ ಶಿಕ್ಷಣ ಟ್ರಸ್ಟ್ ಘಟಕ) ವತಿಯಿಂದ ಜೆಪ್ಪುವಿನ ಶಾಂತಿನಗರ ಮೈದಾನದಲ್ಲಿ ವಾರ್ಷಿಕ ಕ್ರೀಡಾ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು
ವಿದ್ಯಾರ್ಥಿಗಳ ಕವಾಯತಿನೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಸಿಸಿಐ ದುಬೈ ಘಟಕದ ಅಧ್ಯಕ್ಷ ಎಸ್.ಎಮ್.ಬಶೀರ್ ಮಾತನಾಡಿ, ಈಗಿನ ತರುಣ ಮನಸ್ಸುಗಳು ನಾಳಿನ ಜವಾಬ್ದಾರಿಯುತ ನಾಗರಿಕರು ಎಂದು ಮಕ್ಕಳನ್ನು ಹುರಿದುಂಬಿಸಿದರು. ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ನಿಸಾರ್ ಅವರು ಎಸ್.ಎಮ್.ಬಶೀರ್ ಅವರನ್ನು ಹೂಗುಚ್ಛ ನೀಡುವ ಮೂಲಕ ಗೌರವಿಸಿದರು.
ಸಂಸ್ಥೆಯ ಪ್ರಾಂಶುಪಾಲೆ ಆಸ್ಮಾ ಸೈಯದ್ ಸ್ವಾಗತಿಸಿ, ಮಕ್ಕಳಿಗೆ ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳ ಪ್ರಾಧಾನ್ಯವನ್ನು ತಿಳಿಸಿದರು.
ವಿದ್ಯಾರ್ಥಿಗಳು ಓಟ, ಬಾಸ್ಕೆಟ್ ತುಂಬಿಸುವುದು, ಕಾಂಗರೂ ಓಟ, ಕಪ್ಪೆ ಓಟ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ನಲಿದರು. ಮಕ್ಕಳ ರೀತಿಯಲ್ಲಿ ಪೋಷಕರಿಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ನಂತರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಪ್ರಶಸ್ತಿ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿದರು.
ಲುಬೈನಾ ಅವರು ಕಾರ್ಯಕ್ರಮದ ಮುಖ್ಯ ಸಂಯೋಜಕರಾಗಿದ್ದರು. ಪ್ರೀತಿ ಶೆಣೈ ಕಾರ್ಯಕ್ರಮ ನಿರೂಪಿಸಿದರು. ರಯೀಶಾ ವಂದಿಸಿದರು.