ಲೈಂಗಿಕ ಕಿರುಕುಳ: ಮೇಜರ್ ಜನರಲ್ ಅಮಾನತು

ಹೊಸದಿಲ್ಲಿ, 23: ಎರಡು ವರ್ಷಗಳ ಹಿಂದಿನ ಲೈಂಗಿಕ ಕಿರುಕುಳದ ಪ್ರಕರಣಕ್ಕೆ ಸಂಬಂಧಿಸಿ ಮೇಜರ್ ಜನರಲ್ (ಜಿಸಿಎಂ) ಒಬ್ಬರನ್ನು ಸೇವೆಯಿಂದ ಅಮಾನತು ಮಾಡಲು ಸೇನೆಯ ಜನರಲ್ ಕೋರ್ಟ್ ಮಾರ್ಷಲ್ ಶನಿವಾರ ಶಿಫಾರಸು ಮಾಡಿದೆ.
ಲೆಫ್ಟಿನೆಟ್ ರ್ಯಾಂಕ್‌ನ ಅಧಿಕಾರಿ ನೇತೃತ್ವದ ಜಿಸಿಎಂ ರವಿವಾರ ಈ ತೀರ್ಪು ನೀಡಿತು ಎಂದು ಮೂಲಗಳು ತಿಳಿಸಿವೆ. ಸೇನಾ ನಿಯಮದ ಪ್ರಕಾರ ಜಿಸಿಎಂ ಶಿಫಾರಸನ್ನು ಸೇನಾ ಸಿಬ್ಬಂದಿಯ ವರಿಷ್ಠರು ಸೇರಿದಂತೆ ಉನ್ನತ ಅಧಿಕಾರಿಗಳಿಗೆ ಕಳುಹಿಸಿ ಕೊಡಲಾಗುತ್ತದೆ. ಉನ್ನತ ಅಧಿಕಾರಿಗಳಿಗೆ ಈ ಶಿಕ್ಷೆಯನ್ನು ಬದಲಾಯಿಸುವ ಅಧಿಕಾರ ಇದೆ. ಮೇಜರ್ ಜನರಲ್ ಅವರನ್ನು 2016ರಲ್ಲಿ ಈಶಾನ್ಯದಲ್ಲಿ ನಿಯೋಜಿಸಿದ್ದ ಸಂದರ್ಭ ಈ ಘಟನೆ ನಡೆದಿತ್ತು.
Next Story





