ಪರಮಾಣು ಸಾಗಾಟ ಸಾಮರ್ಥ್ಯದ ಅಗ್ನಿ-5 ಯಶಸ್ವಿ ಉಡಾವಣೆ
ಬಾಲಸೋರ್ (ಒಡಿಶಾ), ಡಿ. 23: ಸೇನೆಯ ಬಳಕೆದಾರರ ಪರೀಕ್ಷೆಯ ಭಾಗವಾಗಿ 4 ಸಾವಿರ ಕಿ.ಮೀ. ವ್ಯಾಪ್ತಿಯಲ್ಲಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಪರಮಾಣು ಸಾಗಾಟ ಸಾಮರ್ಥ್ಯದ ದೀರ್ಘ ವ್ಯಾಪ್ತಿಯ ಪ್ರಕ್ಷೇಪಕ ಕ್ಷಿಪಣಿ ಅಗ್ನಿ 5ನ್ನು ರವಿವಾರ ಭಾರತ ಪ್ರಯೋಗಾರ್ಥ ಉಡಾಯಿಸಿತು.
ನೆಲದಿಂದ ನೆಲಕ್ಕೆ ಚಿಮ್ಮುವ ಕಾರ್ಯತಂತ್ರ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯನ್ನು ಡಾ. ಅಬ್ದುಲ್ ಕಲಾಂ ಸಮಗ್ರ ಪರೀಕ್ಷಾ ವಲಯದ ಉಡಾವಣಾ ಸಂಕೀರ್ಣ 4ರಿಂದ ಬೆಳಗ್ಗೆ 8.35ಕ್ಕೆ ಪರೀಕ್ಷಾರ್ಥ ಉಡಾಯಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಪರೀಕ್ಷೆ ಸಂಪೂರ್ಣ ಯಶಸ್ವಿಯಾಗಿದೆ. ಪರೀಕ್ಷಾರ್ಥ ಪ್ರಯೋಗದ ಸಂದರ್ಭ ಎಲ್ಲ ಉದ್ದೇಶಗಳು ಈಡೇರಿವೆ. ಸಂಚಾರಿ ಉಡಾವಕದ ಸಹಾಯದಿಂದ ಉಡಾಯಿಸಲಾದ ಕ್ಷಿಪಣಿಯ ಹಾರಾಟ ಸಾಮರ್ಥ್ಯ ವನ್ನು ರಾಡರ್, ಟ್ರಾಕಿಂಗ್ ವ್ಯವಸ್ಥೆ ಹಾಗೂ ವ್ಯಾಪ್ತಿ ಕೇಂದ್ರ ಪರಿಶೀಲಿಸಿತು.
ಕ್ಷಿಪಣಿಯ ಎಲ್ಲ ಮಾನದಂಡಗಳನ್ನು ಪರಿಶೀಲಿಸಲು ಒಡಿಶಾ ಕರಾವಳಿಯಲ್ಲಿ ರಾಡರ್ ಹಾಗೂ ಇಲೆಕ್ಟ್ರೊ ಆಪ್ಟಿಕಲ್ ವ್ಯವಸ್ಥೆಯನ್ನು ಸ್ಥಾಪಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
Next Story







