Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಿಮಗೆ ಗೊತ್ತಿರಲಿ.... ಡೀಸೆಲ್ ಕಾರುಗಳ...

ನಿಮಗೆ ಗೊತ್ತಿರಲಿ.... ಡೀಸೆಲ್ ಕಾರುಗಳ ಬೆಲೆ ಪೆಟ್ರೋಲ್ ಕಾರುಗಳಿಗಿಂತ 2.5 ಲ.ರೂ.ಹೆಚ್ಚಾಗಲಿದೆ

ವಾರ್ತಾಭಾರತಿವಾರ್ತಾಭಾರತಿ23 Dec 2018 9:38 PM IST
share
ನಿಮಗೆ ಗೊತ್ತಿರಲಿ.... ಡೀಸೆಲ್ ಕಾರುಗಳ ಬೆಲೆ ಪೆಟ್ರೋಲ್ ಕಾರುಗಳಿಗಿಂತ 2.5 ಲ.ರೂ.ಹೆಚ್ಚಾಗಲಿದೆ

ವಾಹನೋದ್ಯಮವು ಪೆಟ್ರೋಲ್ ಚಾಲಿತ ವಾಹನಗಳ ತಯಾರಿಕೆಯತ್ತ ಹೆಚ್ಚೆಚ್ಚು ವಾಲುತ್ತಿದ್ದು,ಈ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ವರ್ಷವಿಡೀ ಚರ್ಚೆಯಾಗುತ್ತಲೇ ಇದೆ. ಈಗ ಸನ್ನಿಹಿತವಾಗಿರುವ ಪ್ರಮುಖ ಬದಲಾವಣೆಯೆಂದರೆ 2020ರಿಂದ ಭಾರತ್ ಸ್ಟೇಜ್-4 ಅಥವಾ ಬಿಎಸ್4 ವಾಹನಗಳ ಮಾರಾಟ ಸ್ಥಗಿತಗೊಳ್ಳಲಿದೆ ಮತ್ತು ಬಿಎಸ್6 ವಾಹನಗಳು ರಸ್ತೆಗಿಳಿಯಲಿವೆ.

ಭಾರತ್ ಸ್ಟೇಜ್ ಎಂದರೆ ಕೇಂದ್ರ ಸರಕಾರವು ವಾಹನಗಳಿಗೆ ನಿಗದಿ ಮಾಡಿರುವ ಮಾಲಿನ್ಯ ಪ್ರಮಾಣದ ಮಾನದಂಡ. 2017,ಎಪ್ರಿಲ್‌ನಲ್ಲಿ ಬಿಎಸ್3 ವಾಹನಗಳು ಹೊರಸೂಸುವ ಹೊಗೆಯಲ್ಲಿ ಅಧಿಕ ಮಾಲಿನ್ಯವಿದೆ ಎಂದು ಅವುಗಳ ಮಾರಾಟವನ್ನು ಸರಕಾರವು ನಿಷೇಧಿಸಿತ್ತು ಮತ್ತು ಬಿಎಸ್4 ವಾಹನಗಳ ತಯಾರಿಕೆಗೆ ಆದೇಶಿಸಿತ್ತು. ವಾಹನ ತಯಾರಿಕೆ ಕಂಪನಿಗಳು 2020ರಿಂದ ಬಿಎಸ್4 ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸಿ ಬಿಎಸ್6 ವಾಹನಗಳನ್ನು ಬಿಡುಗಡೆಗೊಳಿಸಬೇಕಿದೆ. ಇದಕ್ಕಾಗಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳಲು ವಾಹನ ಮತ್ತು ತೈಲ ಕೈಗಾರಿಕೆಗಳು ಒಂದು ಲಕ್ಷ ಕೋಟಿ ರೂ.ಗಳ ಹೊರೆಯನ್ನು ಭರಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ನೂತನ ಮಾನದಂಡಗಳ ನೇರ ಪರಿಣಾಮವುಂಟಾಗುವುದು 2000ದ ದಶಕದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ಡೀಸೆಲ್ ಚಾಲಿತ ಸಣ್ಣ ಕಾರುಗಳ ಮೇಲೆ. ಬಿಎಸ್6 ಮಾನದಂಡ ಜಾರಿಗೆ ಬಂದ ನಂತರ ಡೀಸೆಲ್ ಕಾರುಗಳು ದುಬಾರಿಯಾಗಲಿವೆ ಮಾತ್ರವಲ್ಲ,ಅವುಗಳ ತಯಾರಿಕೆಯೂ ಕಂಪನಿಗಳಿಗೆ ಕಠಿಣವಾಗಲಿದೆ.

ಬಿಎಸ್6 ಮಾನದಂಡಕ್ಕೆ ಅನುಗುಣವಾದ ಡೀಸೆಲ್ ಕಾರುಗಳು ಅವುಗಳ ಪೆಟ್ರೋಲ್ ಆವೃತ್ತಿಗೆ ಹೋಲಿಸಿದರೆ ಸುಮಾರು 2.5 ಲ.ರೂ.ಗಳಷ್ಟು ದುಬಾರಿಯಾಗಬಹುದು ಎಂದು ಅಗ್ರಗಣ್ಯ ಕಾರು ತಯಾರಿಕೆ ಸಂಸ್ಥೆ ಮಾರುತಿ ಸುಝುಕಿ ಈಗಾಗಲೇ ಸುಳಿವು ನೀಡಿದೆ. ಹಾಲಿ ಡೀಸೆಲ್ ಕಾರುಗಳು ಮತ್ತು ಅವುಗಳ ಪೆಟ್ರೋಲ್ ಆವೃತ್ತಿಗಳ ಬೆಲೆಗಳ ನಡುವೆ 80,000 ರೂ.ಗಳಿಂದ 1,50,000 ಲ.ರೂ.ವರೆಗೂ ವ್ಯತ್ಯಾಸವಿದೆ. ಆದರೆ 2020ರಲ್ಲಿ ಬಿಎಸ್ 6 ಜಾರಿಗೊಳ್ಳುವುದರೊಂದಿಗೆ ಪೆಟ್ರೋಲ್ ಹಾಗೂ ಸಿಎನ್‌ಜಿ ಮತ್ತು ವಿದ್ಯುತ್‌ನಂತಹ ಹಸಿರು ಇಂಧನಗಳತ್ತ ಒತ್ತು ಇನ್ನಷ್ಟು ಚುರುಕುಗೊಳ್ಳಲಿದೆ. ಈಗ ಏಳುವ ಪ್ರಶ್ನೆಯೆಂದರೆ ಡೀಸೆಲ್ ಕಾರುಗಳೇಕೆ ಹೆಚ್ಚು ದುಬಾರಿಯಾಗಲಿವೆ ಎನ್ನುವುದು.

ಡೀಸೆಲ್ ಇಂಜಿನ್‌ಗಳ ವಿಷಯದಲ್ಲಿ ಕಟ್ಟುನಿಟ್ಟಿನ ಮಾಲಿನ್ಯ ನಿಯಮಾವಳಿಗಳಿಗೆ ಅಂಟಿಕೊಳ್ಳುವುದು ಸಾಮಾನ್ಯವಾಗಿ ಜಟಿಲವಾಗಿದೆ. ಬಿಎಸ್6 ಗೆ ಬದಲಾಗುವಾಗ ಡೀಸೆಲ್ ವಾಹನಗಳು ಹೊರಸೂಸುವ ಹೊಗೆ ಕಡಿಮೆ ಮಾಲಿನ್ಯವನ್ನು ಹೊಂದಿರುವಂತೆ ಮಾಡಬೇಕಾದರೆ ಇಂಜಿನ್‌ನಲ್ಲಿ ಹೆಚ್ಚಿನ ಪರಿವರ್ತನೆಗಳು ಅಗತ್ಯವಾಗುತ್ತವೆ. ವಾಹನಗಳಿಂದ ಹೊರಸೂಸುವ ಪಾರ್ಟಿಕ್ಯುಲೇಟ್ ಮ್ಯಾಟರ್(ಪಿಎಂ) ಅನ್ನು ನಿಯಂತ್ರಿಸಲು ಅವುಗಳಿಗೆ ಡೀಸೆಲ್ ಪಾರ್ಟಿಕ್ಯುಲೇಟ್ ಫಿಲ್ಟರ್‌ಗಳನ್ನು ಅಳವಡಿಸಬೇಕಾಗುತ್ತದೆ. ನೈಟ್ರೋಜನ್ ಆಕ್ಸೈಡ್‌ಗಳನ್ನು ಸೆಲೆಕ್ಟಿವ್ ಕೆಟಾಲಿಟಿಕ್ ರಿಡಕ್ಷನ್(ಎಸ್‌ಸಿಆರ್)ಮೂಲಕ ನಿರ್ವಹಿಬೇಕಾಗುತ್ತದೆ. ಇದಕ್ಕಾಗಿ ಅಮೋನಿಯಾವನ್ನು ಬಳಸಬೇಕಾಗುತ್ತದೆ ಮತ್ತು ಈ ಅಮೋನಿಯಾ ಟ್ಯಾಂಕ್‌ನ್ನು ಆಗಾಗ್ಗೆ ತುಂಬಿಸುತ್ತಿರಬೇಕಾಗುತ್ತದೆ. ಇವೆಲ್ಲವುಗಳನ್ನು ಒಟ್ಟಾಗಿ ಪರಿಗಣಿಸಿದಾಗ ಡೀಸೆಲ್ ಕಾರುಗಳ ಖರೀದಿ ಮಾತ್ರವಲ್ಲ,ಅವುಗಳ ತಯಾರಿಕೆ ಕೂಡ ವ್ಯಾವಹಾರಿಕವಾಗುವುದಿಲ್ಲ. ಯುರೋಪ್‌ನಲ್ಲಿ ಈಗಾಗಲೇ ಇಂತಹ ಮಾಲಿನ್ಯ ನಿಯಂತ್ರಣ ಮಾನದಂಡಗಳು ಹಲವಾರು ಡೀಸೆಲ್ ಮಾಡೆಲ್‌ಗಳಿಗೆ ಇತಿಶ್ರೀ ಹಾಡಿವೆ. 2020ರಲ್ಲಿ ಬಿಎಸ್6 ಜಾರಿಗೊಂಡ ಬಳಿಕ ಭಾರತೀಯ ವಾಹನ ತಯಾರಿಕೆ ಕಂಪನಿಗಳೂ ಇದೇ ಜಾಡಿನಲ್ಲಿ ಸಾಗುವ ಸಾಧ್ಯತೆಯಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X