ರಾಷ್ಟ್ರೀಯ ಸಮಗ್ರತೆಗಾಗಿ ಪಟೇಲ್ ಪ್ರಶಸ್ತಿ ಸ್ಥಾಪನೆ

ಹೊಸದಿಲ್ಲಿ,ಡಿ.23: ರಾಷ್ಟ್ರೀಯ ಸಮಗ್ರತೆಯನ್ನು ಉತ್ತೇಜಿಸುವಲ್ಲಿ ಅಸಾಧಾರಣ ಪ್ರಯತ್ನಗಳಿಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರಿನಲ್ಲಿ ನೂತನ ಪ್ರಶಸ್ತಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗುಜರಾತಿನ ಕೇವಡಿಯಾದಲ್ಲಿ ನಡೆದ ಡಿಜಿಪಿಗಳು/ಐಜಿಪಿಗಳ ಸಮಾವೇಶದಲ್ಲಿ ಪ್ರಕಟಿಸಿದ್ದಾರೆ.
ಈ ಬಗ್ಗೆ ರವಿವಾರ ಟ್ವೀಟಿಸಿರುವ ಅವರು,ಪಟೇಲ್ ಅವರು ಭಾರತವನ್ನು ಒಗ್ಗೂಡಿಸಲು ತನ್ನ ಜೀವನವನ್ನು ಅರ್ಪಿಸಿದ್ದರು. ಸರ್ದಾರ್ ಪಟೇಲ್ ರಾಷ್ಟ್ರೀಯ ಸಮಗ್ರತೆ ಪ್ರಶಸ್ತಿಯು ಅವರಿಗೆ ಸೂಕ್ತ ಗೌರವವಾಗಿದೆ ಮತ್ತು ಭಾರತದ ಏಕತೆ ಮತ್ತು ರಾಷ್ಟ್ರೀಯ ಸಮಗ್ರತೆಗಾಗಿ ಶ್ರಮಿಸಲು ಜನರಿಗೆ ಸ್ಫೂರ್ತಿಯನ್ನು ನೀಡಲಿದೆ ಎಂದು ಹೇಳಿದ್ದಾರೆ.
Next Story





