ಲೇಡಿಹಿಲ್ ಓವರ್ ಹೆಡ್ ಟ್ಯಾಂಕ್ ನಿಂದ ಭಾರೀ ನೀರು ಸೋರಿಕೆ

ಮಂಗಳೂರು, ಡಿ.23: ಲೇಡಿಹಿಲ್‌ನಲ್ಲಿರುವ ಮಹಾನಗರ ಪಾಲಿಕೆಯ 15 ಲಕ್ಷ ಲೀ. ಸಾಮರ್ಥ್ಯದ ನೀರಿನ ಓವರ್ ಹೆಡ್ ಟ್ಯಾಂಕ್‌ನ ಮೇಲ್ಭಾಗದ ಬಾಲ್ ಕಟ್ ಆಗಿದ್ದು, ಇದರ ಪರಿಣಾಮವಾಗಿ ನೀರು ತುಂಬಿದಾಗ ಸೋರಿಕೆ ಆಗುತ್ತಿದೆ. ಟ್ಯಾಂಕಿನ್ ನೀರು ಕೆಳಗೆ ಬೀಳುತ್ತಿರುವ ದೃಶ್ಯದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ಯಾಂಕಿಯ ನೀರನ್ನು ಖಾಲಿ ಮಾಡಿ ದುರಸ್ತಿ ಮಾಡಬೇಕಾಗಿದೆ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ. ಸೋಮವಾರ ನೀರನ್ನು ಖಾಲಿ ಮಾಡಿ ದುರಸ್ತಿ ಮಾಡಲಾಗುವುದು ಎಂದೂ ಹೇಳಿದ್ದಾರೆ.
ಬಾಲ್ ಕಟ್ ಆಗಿರುವುದರಿಂದ ಟ್ಯಾಂಕ್‌ನಲ್ಲಿ ನೀರು ತುಂಬಿಸುವಂತಿಲ್ಲ. ಇದರಿಂದ ಆಸು ಪಾಸಿನ ಮೂರು ವಾರ್ಡ್‌ಗಳಿಗೆ ನಳ್ಳಿ ನೀರಿನ ಸಮಸ್ಯೆ ಉಂಟಾಗಲಿದೆ ಎಂದು ಪಾಲಿಕೆಯ ಮೂಲಗಳು ವಿವರಿಸಿವೆ.
Next Story