ಬಿಲ್ಲವ ಮಹಾ ಸಮಾವೇಶದ ಮನವಿ ಪತ್ರ ಬಿಡುಗಡೆ

ಉಡುಪಿ, ಡಿ.24: ಬಿಲ್ಲವ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಒತ್ತಾಯಿಸಿ ಮುಂದಿನ ವರ್ಷದ ಫೆ.3ರಂದು ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಬಿಲ್ಲವ ಮಹಾ ಸಮಾವೇಶದ ಮನವಿ ಪತ್ರವನ್ನು ಸಮಾವೇಶದ ಸಮಿತಿ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಇಂದು ಬ್ರಹ್ಮಾವರ ಬಿಲ್ಲವ ಸೇವಾ ಸಂಘದಲ್ಲಿ ಬಿಡುಗಡೆಗೊಳಿಸಿದರು.
ಬಿಲ್ಲವರನ್ನು ಪ್ರವರ್ಗ 2ಎ ಯಿಂದ 1ಎಗೆ ಮೀಸಲಾತಿ ಸೌಲಭ್ಯ, ಬ್ರಹ್ಮಶ್ರೀ ನಾರಾಯಣಗುರು ಯೋಜನೆಯಡಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಕೃಷಿ ಮತ್ತು ಸ್ವಉದ್ಯೋಗ ಮಾಡಲು ಬಡ್ಡಿ ರಹಿತ ಸಾಲ, ಗರೋಡಿಗಳ ಅರ್ಚಕ ರಿಗೆ ಮಾಸಾಶನ ಸೌಲಭ್ಯ, ಗರೋಡಿಯ ಪಹಣೆ ಪತ್ರವನ್ನು ಗರೋಡಿಗಳ ಹೆಸರಿಗೆ ಮಾರ್ಪಾಡು ಮಾಡಬೇಕೆಂಬ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರುವ ಉದ್ದೇಶದಿಂದ ಬ್ರಹ್ಮಾವರ ಬಿಲ್ಲವ ಸೇವಾ ಸಂಘದ, ಜಿಲ್ಲಾ ಬಿಲ್ಲವ ಯುವ ವೇದಿಕೆ ಮತ್ತು ವಿವಿಧ ಬಿಲ್ಲವ ಸಂಘ ಆಶ್ರಯದಲ್ಲಿ ಈ ಸಮಾವೇಶ ವನ್ನು ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಗೌರವಾಧ್ಯಕ್ಷ ಅಚ್ಚುತ ಅಮೀನ್, ಅಧ್ಯಕ್ಷ ಪ್ರವೀಣ್ ಪೂಜಾರಿ, ಬ್ರಹ್ಮಾವರ ಬಿಲ್ಲವ ಸೇವಾ ಸಂಘದ ಉಪಾಧ್ಯಕ್ಷ ಎಚ್.ಅಶೋಕ್ ಪೂಜಾರಿ, ಮುಖಂಡರಾದ ಕಟಪಾಡಿ ಶಂಕರ ಪೂಜಾರಿ, ಕಿರಣ್ ಕುಮಾರ್, ಗಂಗಾಧರ ಸುವರ್ಣ, ಪಿ.ವಿ.ಭಾಸ್ಕರ, ಜಗದೀಶ ಕೆಮ್ಮಣ್ಣು, ರಾಜು ಪೂಜಾರಿ ಉಪ್ಪೂರು, ಪ್ರಕಾಶ ಕೊಡವೂರು, ಪ್ರಭಾಕರ ಪೂಜಾರಿ, ಸಾವಿತ್ರಿ ಗಣೇಶ, ಆಶಾ ದೆಂದೂರುಕಟ್ಟೆ, ಪ್ರೀತಿರಾಜು ಪೂಜಾರಿ ಉಪಸ್ಥಿತರಿದ್ದರು. ನರೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.