ಹನುಮಂತ ಒಬ್ಬ ಕುಸ್ತಿಪಟು ಎಂದ ಮಾಜಿ ಕ್ರಿಕೆಟಿಗ ಚೌಹಾಣ್

ಲಕ್ನೊ, ಡಿ.23: ಹನುಮಂತ(ಆಂಜನೇಯ)ನ ಜಾತಿಯ ಕುರಿತು ನಡೆಯುತ್ತಿರುವ ಚರ್ಚೆಗೆ ಹೊಸ ವ್ಯಾಖ್ಯಾನ ನೀಡಿರುವ ಮಾಜಿ ಕ್ರಿಕೆಟ್ ಆಟಗಾರ ಚೇತನ್ ಚೌಹಾಣ್, ಹನುಮಂತ ಒಬ್ಬ ಕ್ರೀಡಾಪಟು. ಆತ ನಿಷ್ಣಾತ ಕುಸ್ತಿಪಟುವಾಗಿದ್ದ ಎಂದು ಹೇಳಿದ್ದಾರೆ.
ಹನುಮಂತ ದೇವರ ಜಾತಿಯ ಬಗ್ಗೆ ಚರ್ಚೆ ನಡೆಯುವುದು ಸರಿಯಲ್ಲ. ಸಾಧು ಸಂತರಿಗೆ, ಯೋಗಿಗಳಿಗೆ ಜಾತಿಯಿಲ್ಲ. ಅದೇ ರೀತಿ ಹನುಮಂತನನ್ನೂ ಜಾತಿಯ ಚೌಕಟ್ಟಿನಲ್ಲಿ ಬಂಧಿಸಬಾರದು. ನಾನು ಅವರನ್ನು ದೇವರೆಂದು ನಂಬುತ್ತೇನೆ. ಹನುಮಂತ ತನ್ನ ವಿರೋಧಿಗಳೊಂದಿಗೆ ಕುಸ್ತಿ ಆಡುತ್ತಿದ್ದರು. ಆದ್ದರಿಂದ ಅವರೊಬ್ಬರು ಕ್ರೀಡಾಪಟು. ಅದಕ್ಕೆಂದೇ ನಮ್ಮ ದೇಶದ ಕ್ರೀಡಾಳುಗಳು ಶಕ್ತಿ ಮತ್ತು ಬಲ ನೀಡಬೇಕೆಂದು ಅವರನ್ನು ಪೂಜಿಸುತ್ತಾರೆ ಎಂದು ಚೌಹಾಣ್ ಹೇಳಿದ್ದಾರೆ.
Next Story





