ಬೆಂಗಳೂರು: ಲಾರಿ ಢಿಕ್ಕಿ; ಕಾರಿನಲ್ಲಿದ್ದ ಇಬ್ಬರು ಮೃತ್ಯು
ಬೆಂಗಳೂರು, ಡಿ.23: ವೇಗದಲ್ಲಿ ಸಾಗಿ ಬಂದ ಸಿಮೆಂಟ್ ಮಿಕ್ಸಿಂಗ್ ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಇಲ್ಲಿನ ಕೆಂಪೇಗೌಡ ವಿಮಾನ ನಿಲ್ದಾಣ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಿತೇಶ್ ಮಿಶ್ರಾ ಹಾಗೂ ರಾಕೇಶ್ ಕುಮಾರ್ ಎಂಬುವರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರವಿವಾರ ಬೆಳಗ್ಗೆ 5:30 ರ ವೇಳೆಯಲ್ಲಿ ನಗರದ ಎನ್‌ಎಚ್ 7ರ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story





