ಸೌದಿ ದೊರೆಯ ಸಹೋದರ ತಲಾಲ್ ಬಿನ್ ಅಬ್ದುಲಝೀಝ್ ನಿಧನ

ರಿಯಾದ್, ಡಿ. 23: ಸೌದಿ ಅರೇಬಿಯದ ರಾಜಕುಮಾರ ತಲಾಲ್ ಬಿನ್ ಅಬ್ದುಲಝೀಝ್ ಶನಿವಾರ ನಿಧನರಾಗಿದ್ದಾರೆ ಎಂದು ಅವರ ಪುತ್ರ ರಾಜಕುಮಾರ ಅಲ್ ವಾಲಿದ್ ಬಿನ್ ತಲಾಲ್ ತಿಳಿಸಿದ್ದಾರೆ.
ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರು ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲಝೀಝ್‌ರ ಮಲಸಹೋದರ ಆಗಿದ್ದಾರೆ.
‘‘ರಾಜಕುಮಾರ ತಲಾಲ್‌ರನ್ನು ದೇವರು ಶನಿವಾರ ಕರೆಸಿಕೊಂಡರು’’ ಎಂದು ರಾಜಕುಮಾರ ಅಲ್ ವಾಲೀದ್ ಟ್ವೀಟ್ ಮಾಡಿದ್ದಾರೆ.
Next Story





