ಮೂಡುಬಿದಿರೆ: ವಿದ್ಯಾರ್ಥಿ ನಾಪತ್ತೆ

ಮೂಡುಬಿದಿರೆ, ಡಿ. 23: ಪ್ರಥಮ ಬಿಕಾಂ ವಿದ್ಯಾರ್ಥಿಯೋರ್ವ ಹಾಸ್ಟೆಲ್‍ನಿಂದ ಡಿ.18ರಿಂದ ನಾಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಠಾಣೆಗೆ ದೂರು ದಾಖಲಾಗಿದೆ.
ಸುದೈವ (19) ಹಾಸ್ಟೆಲ್‍ನಿಂದ ರಾತ್ರಿ 9.30 ಹೊರಗೆ ತೆರಳಿದವರು ಕಾಲೇಜಿಗೂ ಬಾರದೇ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ. ಬೆಂಗಳೂರು ಮೂಲದ ಕಲಕಪ್ಪ ಶಿವರುದ್ರಪ್ಪ ಮುದಿಗೌಡರ್ ಪುತ್ರ ಸುದೈವ್ 5.6 ಅಡಿ ಎತ್ತರ, ಇಂಗ್ಲಿಷ್, ಹಿಂದಿ, ಕನ್ನಡ ಬಲ್ಲವರಾಗಿದ್ದು ನಾಪತ್ತೆಯಾದಂದು ಕೆಂಪು ಟೀ ಶರ್ಟ್, ನೀಲಿ ಜೀನ್ಸ್ ಧರಿಸಿದ್ದ ಎನ್ನಲಾಗಿದೆ.
Next Story