ತೃತೀಯ ಲಿಂಗಿಗಾದರೂ ಮಕ್ಕಳಾಗಬಹುದು, ಆದರೆ ಸರಕಾರದ ಯೋಜನೆ ಮುಗಿಯುವುದಿಲ್ಲ ಎಂದ ಕೇಂದ್ರ ಸಚಿವ ಗಡ್ಕರಿ
ಮುಂಬೈ,ಡಿ.23: ತೃತೀಯ ಲಿಂಗಿಗಾದರೂ ಮಕ್ಕಳಾಗಬಹುದು,ಆದರೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿನ ತೆಂಭು ಏತ ನೀರಾವರಿ ಯೋಜನೆ ಎಂದಿಗೂ ಪೂರ್ಣಗೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರವಿವಾರ ಇಲ್ಲಿ ವ್ಯಂಗ್ಯವಾಡಿದ್ದಾರೆ.
ಸಾಂಗ್ಲಿಯಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಅವರು,ತೆಂಭು ಯೋಜನೆಯ ಆರ್ಥಿಕ ಕಾರ್ಯಸಾಧ್ಯತೆ ಎಷ್ಟು ಕಠಿಣವಾಗಿದೆಯೆಂದರೆ ಒಮ್ಮೆ ಆ ಕುರಿತು ತನ್ನ ಅಭಿಪ್ರಾಯವನ್ನು ವ್ಯಕ್ತಿಯೋರ್ವರೊಂದಿಗೆ ಹಂಚಿಕೊಂಡಿದ್ದೆ. ತೃತೀಯ ಲಿಂಗಿಗಾದರೂ ಮಕ್ಕಳಾಗಬಹುದು,ಆದರೆ ಈ ನೀರಾವರಿ ಯೋಜನೆ ಎಂದಿಗೂ ಪೂರ್ಣಗೊಳ್ಳುವುದಿಲ್ಲ ಎಂದು ತಾನು ಆಗ ಹೇಳಿದ್ದೆ ಎಂದು ನೆನಪಿಸಿಕೊಂಡರು.
1996ರಲ್ಲಿ ಮಂಜೂರಾದ 1,416.59 ಕೋ.ರೂ.ವೆಚ್ಚದ ಈ ಯೋಜನೆಯು ಕೃಷ್ಣಾ ನದಿಯ ನೀರನ್ನು ಸಾಂಗ್ಲಿ, ಸಾತಾರಾ ಮತ್ತು ಸೊಲ್ಲಾಪುರ ಜಿಲ್ಲೆಗಳಲ್ಲಿ ನೀರಾವರಿ ಕೃಷಿಗೆ ಪೂರೈಸುವ ಉದ್ದೇಶವನ್ನು ಹೊಂದಿದೆ.
Next Story