ಮಾಣಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ: ಗಡಿಯಾರ ತಂಡಕ್ಕೆ ಪ್ರಶಸ್ತಿ

ವಿಟ್ಲ, ಡಿ.24: ಮಾಣಿಯ ಸ್ಟಾರ್ ಪ್ರೆಂಡ್ಸ್ ಆಶ್ರಯದಲ್ಲಿ ಮಾಣಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಇಲ್ಲಿನ ಗಾಂಧಿ ಮೈದಾನದಲ್ಲಿ ರವಿವಾರ ನಡೆಯಿತು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂದೀಪ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಹಿರಿಯ ಕಬಡ್ಡಿ ಆಟಗಾರ ಬೇಬಿ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ ಕುಶಲ ಎಂ. ಪೆರಾಜೆ, ಅನಂತಾಡಿ ಗ್ರಾಮ ಪಂಚಾಯತ್ ಅದ್ಯಕ್ಷ ಸನತ್ ರೈ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಲತೀಫ್ ನೇರಳಕಟ್ಟೆ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಮಾಣಿ ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ವಿಕೇಶ್ ಶೆಟ್ಟಿ, ಉದ್ಯಮಿಗಳಾದ ಪುಷ್ಪರಾಜ್ ಶೆಟ್ಟಿ ಸಾಗು, ರಶೀದ್ ನೀರಪಾದೆ, ಹುಸೈನ್ ಸೇರ, ಮನೋಜ್ ಕುಮಾರ್ ರೈ, ಸಲೀಂ ಹಾಜಿ ಸಕ್ಸಸ್ ಕುಕ್ಕರಬೆಟ್ಟು, ಸಿರಾಜ್ ಸಕ್ಸಸ್ ಕುಕ್ಕರಬೆಟ್ಟು, ಕಬಡ್ಡಿ ತೀರ್ಪುಗಾರರಾದ ಮಜೀದ್ ಮಾಣಿ, ಮೂಸಾ ಕರೀಂ ಮಾಣಿ, ಹಬೀಬ್ ಕೊಡಾಜೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರೆಂಡ್ಸ್ ಪದಾಧಿಕಾರಿಗಳಾದ ಇರ್ಶಾದ್, ರಾಕ್, ಝಕರಿಯ, ಶಾಫಿ, ಆಸಿಫ್, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು. ಹಾರೂನ್ ಕೊಡಾಜೆ ಸ್ವಾಗತಿಸಿ, ವಂದಿಸಿದರು. ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.
ಗಡಿಯಾರ ತಂಡಕ್ಕೆ ಪ್ರಶಸ್ತಿ:
16 ತಂಡಗಳು ಭಾಗವಹಿದ್ದ ಲೀಗ್ ಮಾದರಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎ-ಒನ್ ಅಟ್ಯಾಕರ್ಸ್ ಗಡಿಯಾರ ತಂಡ ಪ್ರಥಮ, ಬ್ರೇಕ್ ಕೋಬ್ರಾ ಕೊಡಾಜೆ ತಂಡ ದ್ವಿತೀಯ ಸ್ಥಾನವನ್ನು ಗಳಿಸಿತು.
ಕೊಡಾಜೆ ತಂಡದ ಇರ್ಶಾದ್, ಇಮ್ತಿಯಾಝ್ ಪರ್ಲೊಟ್ಟು, ಹಾಗೂ ಗಡಿಯಾರ ತಂಡದ ನಿಸಾರ್ ವೈಯುಕ್ತಿಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.







