ಬಾರ್ಸಿಲೋನ ಎಫ್‌ಸಿಯಿಂದ ವಿಶೇಷ ಉಡುಗೊರೆ ಸ್ವೀಕರಿಸಿದ ಸೌರವ್ ಗಂಗುಲಿ

ಮ್ಯಾಡ್ರಿಡ್, ಡಿ.24: ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಅವರ ಫುಟ್ಬಾಲ್ ಮೇಲಿನ ಅಭಿಮಾನ ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಲಾ ಲಿಗದ ಅಗ್ರ ಕ್ಲಬ್ ಬಾರ್ಸಿಲೋನ ಎಫ್‌ಸಿ ಗಂಗುಲಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದೆ.
‘ದಾದಾ’ ಎಂದು ಬರೆದಿರುವ ಜೆರ್ಸಿಯೊಂದನ್ನು ಬಾರ್ಸಿಲೋನ ತಂಡ ಗಂಗುಲಿಗೆ ಉಡುಗೊರೆಯಾಗಿ ನೀಡಿ ಗೌರವಿಸಿದೆ. ನೌ ಕ್ಯಾಂಪ್‌ಗೆ ಭೇಟಿ ನೀಡಿರುವ ಗಂಗುಲಿ, ಬಾರ್ಸಿಲೋನ ಕ್ಲಬ್ ಬೋರ್ಡ್ ಸದಸ್ಯ ಒರೊಲ್ ಥಾಮಸ್‌ರಿಂದ ಜೆರ್ಸಿಯನ್ನು ಸ್ವೀಕರಿಸಿದರು.
ಗಂಗುಲಿ ತನ್ನ ಪುತ್ರಿ ಸಾನಾರೊಂದಿಗೆ ಬಾರ್ಸಿಲೋನಕ್ಕೆ ಭೇಟಿ ನೀಡಿರುವ ಪೋಟೊವನ್ನು ಈ ಹಿಂದೆ ಟ್ವಿಟರ್‌ನಲ್ಲಿ ಹಾಕಿದ್ದರು.
ಗಂಗುಲಿ ಭಾರತದ ಫುಟ್ಬಾಲ್ ಲೀಗ್ ಇಂಡಿಯನ್ ಸೂಪರ್ ಲೀಗ್ ತಂಡ ಎಟಿಕೆಯ ಸಹ-ಮಾಲಕನಾಗಿದ್ದಾರೆ.
Next Story