ಕುಳಾಯಿ: ಸ್ಟೈಲ್ ಫೌಂಡೇಶನ್ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ

ಮಂಗಳೂರು, ಡಿ.24: ಕುಳಾಯಿಯ ಸ್ಟೈಲ್ ಫೌಂಡೇಶನ್ ಮತ್ತು ಪ್ರಸಾದ್ ನೇತ್ರಾಲಯದ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಕಣ್ಣಿನ ಬಗ್ಗೆ ಮಾಹಿತಿ ಶಿಬಿರವು ಕುಳಾಯಿಯ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ಎಚ್.ವಿ. ಸಂಘದ ಕಾರ್ಯದರ್ಶಿ ಎಂ.ವೆಂಕಟ್ ರಾವ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರಸಾದ್ ನೇತ್ರಾಲಯದ ವೈದ್ಯಾಧಿಕಾರಿ ವಿಕ್ರಮ್ ಜೈನ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಮಧುಕರ್ ಕನ್ನರ್, ಉದ್ಯಮಿ ರಫೀಕ್ ಮಿತ್ತಬೆಟ್ಟು, ಸ್ಟೈಲ್ ಫೌಂಡೇಶನ್ ಸಲಹೆಗಾರ ಶರೀಫ್ ಬಿ.ಎಂ., ಕುಳಾಯಿ ನಾಗರಿಕ ಸಮಿತಿಯ ಗಂಗಾಧರ್ ಬಂಜನ್, ಸುರತ್ಕಲ್ ರಾಮಕೃಷ್ಣ ಮಿಷನ್ ನ ಸಂಯೋಜಕ ಸತೀಶ್ ಸದಾನಂದ ಭಾಗವಹಿಸಿದ್ದರು.
95ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದರು.
Next Story





