ವಾಜಪೇಯಿ ಸ್ಮರಣಾರ್ಥ 100 ರೂ. ನಾಣ್ಯವನ್ನು ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ, ಡಿ.24: ಬಿಜೆಪಿ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ 100 ರೂಪಾಯಿಯ ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ.
ವಾಜಪೇಯಿ ಅವರ 94ನೇ ಜನ್ಮದಿನಾಚರಣೆಯ ಮುನ್ನಾದಿನ ಅವರ ಹೆಸರಿನ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ,‘‘ ಅಟಲ್ ಜಿ ನಮ್ಮಾಂದಿಗಿಲ್ಲ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ’’ ಎಂದರು.
100 ರೂಪಾಯಿ ನಾಣ್ಯದ ಒಂದು ಭಾಗದಲ್ಲಿ ವಾಜಪೇಯಿ ಅವರ ಚಿತ್ರ, ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಅವರ ಹೆಸರು. ಹುಟ್ಟಿದ ಹಾಗೂ ನಿಧನರಾದ ಇಸವಿಯನ್ನು ಕೆತ್ತಲಾಗಿದೆ. ನಾಣ್ಯವು 35 ಗ್ರಾಮ್ ತೂಕವಿದೆ. ನಾಣ್ಯದ ಮತ್ತೊಂದು ಬದಿ ಅಶೋಕ ಲಾಂಛನದ ಜೊತೆಗೆ ಸತ್ಯಮೇವ ಜಯತೇ ಎಂದು ಕೆತ್ತಲಾಗಿದೆ.
Next Story





