ಕೇಂದ್ರ ಸರಕಾರ ಹಿಂದೆ ಸರಿಯದೇ ಇದ್ದರೆ ನಾಳೆಯೇ ರಾಮ ಮಂದಿರ ನಿರ್ಮಾಣವಾಗಬಹುದು: ಸುಬ್ರಮಣಿಯನ್ ಸ್ವಾಮಿ
ಹೊಸದಿಲ್ಲಿ, ಡಿ.24: ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಹಿಂದೆ ಸರಿಯದೇ ಇದ್ದರೆ ಅಯೋಧ್ಯೆಯಲ್ಲಿ ನಾಳೆ ಬೇಕಾದರೂ ರಾಮ ಮಂದಿರ ನಿರ್ಮಿಸಬಹುದು ಎಂದು ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ರಾಮ ಮಂದಿರ ನಿರ್ಮಾಣವಾಗುವುದೆಂದೂ ಅವರು ಹೇಳಿದರು.
ಬಿಜೆಪಿಗೆ ಮಾತ್ರ ರಾಮ ಮಂದಿರ ನಿರ್ಮಾಣ ಮಾಡಲು ಸಾಧ್ಯ ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಇತ್ತೀಚಿಗಿನ ಹೇಳಿಕೆಯನ್ನು ಬೆಂಬಲಿಸಿದ ಸ್ವಾಮಿ ``ಆದಿತ್ಯನಾಥ್ ಸರಿಯಾಗಿಯೇ ಹೇಳಿದ್ದಾರೆ'' ಎಂದಿದ್ದಾರೆ.
2019ರ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಸರಕಾರ ರಚಿಸುವುದೆಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ ಅವರು ``ಇತ್ತೀಚಿಗಿನ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಅತ್ಯಲ್ಪ ಅಂತರದಿಂದ ಸೋತಿರುವುದರಿಂದ ಈ ರಾಜ್ಯಗಳ ಜನರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಖಂಡಿತ ಮತ ನೀಡಲಿದ್ದಾರೆ'' ಎಂದು ಹೇಳಿದರು.
Next Story