ಭೀಕರ ಸರಣಿ ಅಪಘಾತ: ಏಳು ಜನರು ಬಲಿ
ರೋಹ್ಟಕ್, ಡಿ.24: ಬೆಳಗ್ಗಿನ ಮಂಜು ಮಸುಕಿದ ವಾತಾವರಣದಿಂದಾಗಿ 50ಕ್ಕೂ ಅಧಿಕ ವಾಹನಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿರುವ ಘಟನೆ ಹರ್ಯಾಣದ ಜನನಿಬಿಡ ಮೇಲ್ಸೇತುವೆಯಲ್ಲಿ ಸೋಮವಾರ ನಡೆದಿದೆ.
ಮಂಜು ಕವಿದ ವಾತಾವರಣದಲ್ಲಿ ರಸ್ತೆ ಕಾಣದ ಹಿನ್ನೆಲೆಯಲ್ಲಿ ಈ ಭೀಕರ ಸರಣಿ ಅಪಘಾತ ಸಂಭವಿಸಿದೆ. ಘಟನೆಯು ರೋಹ್ಟಕ್-ರೆವಾರಿ ಹೆದ್ದಾರಿಯಲ್ಲಿ ನಡೆದಿದೆ.
ಸರಣಿ ಢಿಕ್ಕಿಯಾದ ವಾಹನಗಳಲ್ಲಿ ಸ್ಕೂಲ್ ಬಸ್ ಹಾಗೂ ಕಾರುಗಳು ಅಧಿಕ ಸಂಖ್ಯೆಯಲ್ಲಿದ್ದವು. ಮೃತಪಟ್ಟಿರುವ 7 ಜನರ ಪೈಕಿ ಆರು ಮಂದಿ ಮಹಿಳೆಯರು ಸೇರಿದ್ದಾರೆ.
ಹರ್ಯಾಣ, ದಿಲ್ಲಿ, ಪಂಜಾಬ್, ಉತ್ತರಪ್ರದೇಶ ಹಾಗೂ ರಾಜಸ್ಥಾನದಲ್ಲಿ ಇಂದು ಬೆಳಗ್ಗೆ ದಟ್ಟ ಮಂಜು ಆವರಿಸಿತ್ತು.
Next Story