ಪಕ್ಷದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

ಮಂಗಳೂರು, ಡಿ.24: ಜೆಡಿಎಸ್ ಪಕ್ಷವು 1983ರಿಂದ ಇಂದಿನ ತನಕ 35 ವರ್ಷಗಳಿಂದ ಈ ರಾಜ್ಯದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ. ಈ ರಾಜ್ಯಕ್ಕೆ 4 ಮುಖ್ಯಮಂತ್ರಿಗಳನ್ನು ಕೊಟ್ಟು ರಾಜ್ಯದ ಅಭಿವೃದ್ಧಿಯಲ್ಲಿ ಸಾಕಷ್ಟು ಶ್ರಮಿಸಿದೆ. ಅದರಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ ಜನಸಾಮಾನ್ಯರ ಸವಲತ್ತುಗೋಸ್ಕರ ವಿಶೇಷ ಶ್ರಮ ವಹಿಸುತ್ತಿದ್ದಾರೆ. ಜೆಡಿಎಸ್ ಪಕ್ಷವು ತನ್ನದೇ ತತ್ವ, ಧ್ಯೇಯ, ಧೋರಣೆ ಮೂಲಕ ಜನರ ಹೃದಯ ಗೆದ್ದಿದೆ. ಪಕ್ಷದ ಬಗ್ಗೆ ದ.ಕ. ಜಿಲ್ಲೆಯ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯ ಎಂದು ಪಕ್ಷದ ರಾಜ್ಯಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.
ನಗರಕ್ಕೆ ರವಿವಾರ ಆಗಮಿಸಿದ್ದ ಅವರು, ಸರ್ಕ್ಯೂಟ್ ಹೌಸ್ ನಲ್ಲಿ ಪಕ್ಷದ ಜಿಲ್ಲಾ ಪ್ರಮುಖರ ಸಭೆ ನಡೆಸಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಪಕ್ಷದ ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾತನಾಡಿದರು.
ಪಕ್ಷದ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ, ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ, ಕಾರ್ಯಾಧ್ಯಕ್ಷ ರಾಮ್ ಗಣೇಶ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಜೈನ್, ಮಹಿಳಾ ಘಟಕದ ಅಧ್ಯಕ್ಷ ಸುಮತಿ ಹೆಗ್ಡೆ, ಮುಡಾ ಮಾಜಿ ಅಧ್ಯಕ್ಷ ರಮೇಶ್, ಮೀರಾ ಸಾಹೇಬ್ ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆ ಬಗ್ಗೆ ಸಲಹೆಗಳನ್ನು ನೀಡಿದರು.
ಪಕ್ಷದ ಪ್ರಮುಖರಾದ ಗೋಪಾಲಕೃಷ್ಣ ಅತ್ತಾವರ, ರತ್ನಾಕರ್ ಸುವರ್ಣ, ಲತೀಫ್ ವಳಚ್ಚಿಲ್, ಕಾರ್ಪೊರೇಟರ್ ರಮೀಝ ಬಾನು, ಶ್ರೀನಾಥ್, ಮಧುಸೂದನ್, ಕಿರಣ್ ಪೈ, ಉಪೇಂದ್ರ, ಫೈಝಲ್, ರಘು, ಇಝಾ ಬಜಾಲ್, ಹಮೀದ್ ಬೆಂಗ್ರೆ, ಫ್ರಾನ್ಸಿಸ್ ಫೆರ್ನಾಂಡಿಸ್, ಎನ್.ಪಿ.ಪುಷ್ಪರಾಜನ್, ಡಿ.ಪಿ.ಹಮ್ಮಬ, ನಾಸಿರ್, ಮುಹಮ್ಮದ್, ಕುಲದೀಪ್, ಇಸ್ಮಾಯೀಲ್ ಉಪಸ್ಥಿತರಿದ್ದರು.