ಬೋಳಂಗಡಿಯಲ್ಲಿ ರಸ್ತೆ ಮಧ್ಯೆ ಕೆಟ್ಟು ನಿಂತ ಸರಕಾರಿ ಬಸ್: ಸಾಲುಗಟ್ಟಿ ನಿಂತ ವಾಹನಗಳು

ಬಂಟ್ವಾಳ, ಡಿ.24: ರಸ್ತೆ ಮಧ್ಯೆ ಸರಕಾರಿ ಬಸ್ಸೊಂದು ಕೆಟ್ಟು ನಿಂತು ರಸ್ತೆ ಸಂಚಾರಕ್ಕೆ ಅಡಚಣೆಯಾದ ಘಟನೆ ಮೆಲ್ಕಾರ್ ಸಮೀಪದ ಬೋಳಂಗಡಿ ಎಂಬಲ್ಲಿ ಸೋಮವಾರ ನಡೆದಿದೆ.
ಬಸ್ ಕೆಟ್ಟುಹೋದ ಪರಿಣಾಮ ಮಧ್ಯಾಹ್ನದಿಂದಲೇ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ರೀತಿಯಲ್ಲಿ ಸಂಚಾರ ಅಡಚಣೆಯಾದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಿದರು. ಕಲ್ಲಡ್ಕದಿಂದ ನರಹರಿ ಪರ್ವತದವರೆಗೂ ವಾಹನಗಳು ಸಾಲುಗಟ್ಟಿ ನಿಂತಿತ್ತು.
ವರದಿ: ಶಂಸುದ್ದೀನ್ ಕೊಳ್ತಂಕರೆ
Next Story