ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆ

ಬಂಟ್ವಾಳ, ಡಿ. 24: ಆಕಾಶವಾಣಿಯ ರಾಷ್ಟ್ರೀಯ ಯುವದಿನಾಚರಣೆಯ ಪ್ರಯುಕ್ತ "ಮಹಾತ್ಮ ಗಾಂಧೀಜಿ-150" ವಿಷಯದ ಕುರಿತು ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಂಟ್ವಾಳ ಶ್ರೀವೆಂಕಟರಮಣ ಸ್ವಾಮೀ ಕಾಲೇಜಿನ ವಿದ್ಯಾರ್ಥಿಗಳಾದ ಹರ್ಷಿತ್ ಕೆ. ಹಾಗೂ ಮಿಲ್ಟನ್ ಪಿಂಟೋ ಅವರು ಪೂರ್ವಭಾವಿ ಸುತ್ತಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಜ. 3ರಂದು ಬೆಂಗಳೂರು ಕ್ರಸ್ಟ್ ವಿಶ್ವವಿದ್ಯಾಲಯದ ಸ್ಕೈ ವಿವ್ಯೋ ಅಡಿಟೋರಿಯಮ್‍ನಲ್ಲಿ ನಡೆಯುವ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಮಂಗಳೂರು ಆಕಾಶವಾಣಿ ಪ್ರತಿನಿಧಿಗಳಾಗಿ ಭಾಗವಹಿಸುವರು ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
Next Story