ಸಂಪುಟ ವಿಸ್ತರಣೆ: ಸೂಕ್ತ ಲಗ್ನ ಕೊಡಿ ಎಂದು ಪತ್ರಕರ್ತರನ್ನು ಕೇಳಿದ ಎಚ್.ಡಿ.ರೇವಣ್ಣ

ಬೆಂಗಳೂರು, ಡಿ.24: ಪಂಚಾಂಗ ನೋಡಿ ಹೊಸ ವರ್ಷದ ಬಳಿಕ ಜೆಡಿಎಸ್ ಸಂಪುಟ ವಿಸ್ತರಣೆ ಮಾಡಲಾಗುವುದು. ಇಲ್ಲವೆಂದರೆ, ನೀವೇ ಒಂದು ಲಗ್ನ ಕೊಡಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸುದ್ದಿಗಾರರಿಗೆ ಕೇಳಿದ ಘಟನೆ ನಡೆಯಿತು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವರ್ಷ ಸಂಕ್ರಾಂತಿ ಬಳಿಕ ಜೆಡಿಎಸ್ ಸಂಪುಟ ವಿಸ್ತರಣೆಯಾಗಲಿದೆ ಎನ್ನುವ ನಿರೀಕ್ಷೆ ಇದೆ ಎಂದು ಹೇಳಿದರು.
ಬೆಳಗಾವಿ-ಗೋವಾ ರಸ್ತೆ ಅಭಿವೃದ್ಧಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ. ಹೀಗಾಗಿ, ಬದಲಿ ಮಾರ್ಗ ನೀಡುವ ಕುರಿತು ಸಭೆ ಮಾಡಿದ್ದೇವೆ. ಬದಲಿ ಮಾರ್ಗಕ್ಕೆ ಹೆಚ್ಚುವರಿ ಸಮಯಬೇಕು ಎಂದು ಗೋವಾ ಹೇಳಿದೆ ಎಂದು ಮಾಹಿತಿ ನೀಡಿದರು.
Next Story





