ಫ್ಲಾಟ್‌ಗೆ ನುಗ್ಗಿ ನಗ-ನಗದು ಕಳವು
ಮಣಿಪಾಲ, ಡಿ.24: ವಿದ್ಯಾರತ್ನನಗರದ ಸ್ವರ್ಣಗಿರಿ ಆಪಾರ್ಟ್‌ಮೆಂಟ್‌ನಲ್ಲಿ ರುವ ಫ್ಲಾಟ್ ಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಡಿ.23ರ ಮಧ್ಯಾಹ್ನ 12:30 ಗಂಟೆಯಿಂದ ಡಿ.24ರಂ ಬೆಳಿಗ್ಗೆ 9:20ರ ಮಧ್ಯಾವಧಿಯಲ್ಲಿ ಕಳ್ಳರು ಸುಭಾಶ್ ಚಂದ್ರ ಶೆಟ್ಟಿ ಎಂಬವರ ಫ್ಲಾಟ್ ನ ಡೋರ್ ಲಾಕ್‌ನ್ನು ಮುರಿದು ಒಳನುಗ್ಗಿದ ಕಳ್ಳರು ಸುಮಾರು 307 ಗ್ರಾಂ ತೂಕದ ಚಿನ್ನಾಭರಣ, 2 ಜೊತೆ ವಜ್ರದ ಕಿವಿಯೋಲೆ ಹಾಗೂ 20,000ರೂ. ನಗದು ಕಳವು ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story