ಕ್ರಿಸ್ಮಸ್ ಸಂದರ್ಭದಲ್ಲಿ ದಾಳಿ ಸಾಧ್ಯತೆ: ಬಾರ್ಸಿಲೋನದಲ್ಲಿ ಎಚ್ಚರಿಕೆ
ಬಾರ್ಸಿಲೋನ, ಡಿ. 24: ಕ್ರಿಸ್ಮಸ್ ರಜೆಯ ಅವಧಿಯಲ್ಲಿ ಸ್ಪೇನ್ ನ ಬಾರ್ಸಿಲೋನ ನಗರದಲ್ಲಿ ಭಯೋತ್ಪಾದಕ ದಾಳಿ ನಡೆಯಬಹುದು ಎಂಬುದಾಗಿ ಅಮೆರಿಕದ ವಿದೇಶಾಂಗ ಇಲಾಖೆ ಎಚ್ಚರಿಕೆ ನೀಡಿದ ಬಳಿಕ, ನಗರದಲ್ಲಿ ಸೋಮವಾರ ಎಚ್ಚರಿಕೆ ಘೋಷಿಸಲಾಗಿದೆ.
‘‘ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಬಾರ್ಸಿಲೋನದ ಲಾಸ್ ರಂಬ್ಲಾಸ್ ಪ್ರದೇಶದಲ್ಲಿ ಬಸ್‌ಗಳು ಸೇರಿದಂತೆ ವಾಹನಗಳ ಚಲನೆಯ ಮೇಲೆ ಹೆಚ್ಚಿನ ನಿಗಾ ಇಡಿ. ಭಯೋತ್ಪಾದಕರು ಯಾವುದೇ ಎಚ್ಚರಿಕೆಯಿಲ್ಲದೆ ಪ್ರವಾಸಿ ಸ್ಥಳಗಳು, ಸಾರಿಗೆ ಕೇಂದ್ರಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ದಾಳಿ ನಡೆಸಬಹುದು’’ ಎಂಬುದಾಗಿ ಅಮೆರಿಕದ ವಿದೇಶಾಂಗ ಇಲಾಖೆಯ ಕೌನ್ಸುಲರ್ ವ್ಯವಹಾರಗಳ ಬ್ಯೂರೋ ರವಿವಾರ ಟ್ವೀಟ್ ಮಾಡಿದೆ.
Next Story