ಪಾಕ್ ಪಡೆಯಿಂದ ಕದನ ವಿರಾಮ ಉಲ್ಲಂಘನೆ
ಜಮ್ಮು, ಡಿ. 24: ಜಮ್ಮು ಹಾಗೂ ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿನಿಯಂತ್ರಣ ರೇಖೆಯ ಗ್ರಾಮಗಳು ಹಾಗೂ ಮುಂಚೂಣಿ ಠಾಣೆಗಳ ಮೇಲೆ ಪಾಕಿಸ್ತಾನ ಪಡೆ ಸೋಮವಾರ ಗುಂಡು ಹಾರಿಸಿದೆ ಹಾಗೂ ಗುಂಡಿನ ದಾಳಿ ನಡೆಸಿದೆ.
ನೌಶೀರಾ ವಲಯದ ಕೆರಿ, ಲಾಮ್, ಪುಖ್ರಾನಿ ಹಾಗೂ ಪೀರ್ ಬಾದಸೇರ್ ಪ್ರದೇಶಗಳ ಮೇಲೆ ಪಾಕ್ ಸೇನಾ ಪಡೆ ಗುಂಡು ಹಾರಿಸಿತು ಹಾಗೂ ಶೆಲ್ ದಾಳಿ ನಡೆಸಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಡಿನಿಯಂತ್ರಣ ರೇಖೆಯಲ್ಲಿ ಗಸ್ತು ನಡೆಸುತ್ತಿದ್ದ ಸೇನಾ ಸಿಬ್ಬಂದಿ ಪಾಕ್‌ನ ಕದನ ವಿರಾಮ ಉಲ್ಲಂಘನೆಗೆ ತಕ್ಕ ಪ್ರತ್ಯುತ್ತರ ನೀಡಿದರು.
Next Story