ಅಯ್ಯಪ್ಪ ವ್ರತದಾರಿಗೆ ಹಲ್ಲೆ: ಆರೋಪಿ ಪೊಲೀಸ್ ವಶಕ್ಕೆ

ಪುತ್ತೂರು,ಡಿ.24: ಓವರ್ ಟೇಕ್ ವಿಚಾರಕ್ಕೆ ಸಂಬಂಧಿಸಿ ಸ್ಕೂಟರ್ ಸವಾರ ಅಯ್ಯಪ್ಪ ವ್ರತದಾರಿಯೋರ್ವರಿಗೆ ಕಾರು ಚಾಲಕರೋರ್ವರು ಹಲ್ಲೆ ನಡೆಸಿದ ಘಟನೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ಹಾರಾಡಿ ರೈಲ್ವೇ ಬ್ರಿಡ್ಜ್ ಸಮೀಪ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ವರದಿಯಾಗಿದೆ.
ಬನ್ನೂರು ಕರ್ಮಲ ನಿವಾಸಿ ಬೊಳುವಾರಿನಲ್ಲಿ ಚಾಂಪಿಯನ್ ಸೈಕಲ್ ಶಾಪ್ ಹೊಂದಿರುವ ಅಬ್ಬಾಸ್ ಎಂಬವರ ಪುತ್ರ ಸೈಪುದ್ದೀನ್(27) ಬಂಧಿತ ಆರೋಪಿ.
ಅಯ್ಯಪ್ಪ ವ್ರತದಾರಿ ಬನ್ನೂರು ಕರ್ಮಲ ಮಾರ್ನಡ್ಕ ನಿವಾಸಿ ಪುನಿತ್(25) ಹಲ್ಲೆಗೊಳಗಾದವರು. ಅಯ್ಯಪ್ಪ ವ್ರತಧಾರಿ ಪುನಿತ್ ಅವರು ನಿಂತಿಕಲ್‍ನಲ್ಲಿ ವೆಲ್ಟಿಂಗ್ ಶಾಫ್ ಹೊಂದಿದ್ದು, ಇತರ ವ್ರತಧಾರಿಗಳೊಂದಿಗೆ ಹಾರಾಡಿಯಲ್ಲಿರುವ ಆಶ್ರಮದಲ್ಲಿ ವ್ರತಾಚರಣೆ ಕೈಗೊಂಡಿದ್ದರು. ದ.24ರಂದು ಸಂಜೆ ಅವರು ಸ್ಕೂಟರ್ ನಲ್ಲಿ ಹಾರಾಡಿ ಆಶ್ರಮಕ್ಕೆ ಹೊರಟಿದ್ದರು. ಬೊಳುವಾರು ಸಮೀಪ ಕಾರೊಂದನ್ನು ಅವರು ಓವರ್ ಟೇಕ್ ಮಾಡಿ ಹೋಗಿದ್ದಾರೆ. ಆದರೆ ಕಾರು ಚಾಲಕ ಓವರ್‍ಟೇಕ್ ಮಾಡಿದ ವ್ಯಕ್ತಿಯನ್ನು ಹಾರಾಡಿ ಸಮೀಪ ಹಿಂದಿಕ್ಕಿ ನಿಲ್ಲಿಸಿ ಅಯ್ಯಪ್ಪ ವ್ರತಧಾರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ಸಂದರ್ಭ ಅದೇ ದಾರಿಯಲ್ಲಿ ಬರುತ್ತಿದ್ದ ಪೊಲೀಸರು ಆರೋಪಿ ಮತ್ತು ಹಲ್ಲೆಗೊಳಗಾದ ವ್ಯಕ್ತಿಯನ್ನು ಠಾಣೆಗೆ ಕರೆದೊಯ್ದಿದ್ದರು. ಠಾಣೆಯಲ್ಲಿ ವಿಚಾರಣೆ ನಡೆಸಿ ಘಟನೆಯ ಕುರಿತು ಆಯ್ಯಪ್ಪ ವ್ರತಧಾರಿ ಪುನಿತ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.