Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಪಾಯ ಇದೆ ನಿಜ, ಆದರೆ ಎಲ್ಲಿಂದ?

ಅಪಾಯ ಇದೆ ನಿಜ, ಆದರೆ ಎಲ್ಲಿಂದ?

ಸುರೇಶ್ ಭಟ್, ಬಾಕ್ರಬೈಲ್ಸುರೇಶ್ ಭಟ್, ಬಾಕ್ರಬೈಲ್25 Dec 2018 12:02 AM IST
share
ಅಪಾಯ ಇದೆ ನಿಜ, ಆದರೆ ಎಲ್ಲಿಂದ?

‘‘ಹಿಂದೂ ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ತಕ್ಕ ಉತ್ತರ ನೀಡುವ ಮೂಲಕ ಪರಿಹಾರಕ್ಕೆ ಮುಂದಾಗಬೇಕಿದ್ದು ಲವ್ ಜಿಹಾದ್, ಗೋಹತ್ಯೆ ಮೊದಲಾದ ಹಿಂದೂ ವಿರೋಧಿ ಕೃತ್ಯಗಳನ್ನು ಹಿಂದೂ ಸಮಾಜ ಸಂಘಟಿತವಾಗಿ ಹಿಮ್ಮೆಟ್ಟಿಸಬೇಕು’’ ಎಂದು ಬಜರಂಗ ದಳದ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಇದೇ ಡಿಸೆಂಬರ್ 16ರಂದು ಹೇಳಿದರೆಂದು ಪತ್ರಿಕಾವರದಿಗಳಿಂದ ತಿಳಿದುಬರುತ್ತದೆ. ಸನ್ಮಾನ್ಯರು ಇಂತು ಹಿಂದೂ ಸಮಾಜ ಸಂಘಟಿತವಾಗಿ ಸವಾಲುಗಳನ್ನು ಹಿಮ್ಮೆಟ್ಟಿಸುವಂತೆ ಅಪ್ಪಣೆ ಕೊಡಿಸಿರುವುದು ಪುತ್ತೂರು ತಾಲೂಕಿನ ಕೆಯ್ಯೂರು ಮಹಿಷಮರ್ದಿನಿ ದುರ್ಗಾ ಪರಮೇಶ್ವರಿ ದೇವಾಲಯದ ಎದುರು.

ಸನ್ಮಾನ್ಯರಿಗೆ ಕೇವಲ ಎರಡು ದಿನಗಳ ಹಿಂದೆ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತು ಮಾರಮ್ಮ ದೇವಾಲಯದಲ್ಲಿ ನಡೆದ ಘನಘೋರ ದುರಂತದ ಸುದ್ದಿ ತಿಳಿಯದೆ ಇರಲಾರದು. ಅಲ್ಲಿ ಮಾರಮ್ಮ ಮಂದಿರದ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹಾದೇವ ಸ್ವಾಮಿ ಅಲಿಯಾಸ್ ದೇವಣ್ಣ ಬುದ್ದಿ, ವ್ಯವಸ್ಥಾಪಕ ಮಹದೇವ ಸ್ವಾಮಿ, ಆತನ ಪತ್ನಿ ಅಂಬಿಕಾ ಮತ್ತಿತರರು ಸೇರಿಕೊಂಡು ಪ್ರಸಾದದಲ್ಲಿ ಕೀಟನಾಶಕ ಬೆರೆಸಿ ಸ್ತ್ರೀಪುರುಷರೆನ್ನದೆ 16 ಮಂದಿ ಅಮಾಯಕ ಹಿಂದೂಗಳನ್ನು ಕೊಂದು ಹಾಕಿದ್ದಾರೆ. ಮೃತರ ಸಂಖ್ಯೆ ದಿನೇ ದಿನೇ ಏರುತ್ತಲಿದೆ. ಇನ್ನು ಅಸ್ವಸ್ಥರಾಗಿರುವ 100ಕ್ಕೂ ಅಧಿಕ ಹಿಂದೂಗಳು ಮುಂದೆ ಪಾರ್ಶ್ವವಾಯು, ನರಸಂಬಂಧಿ ಮತ್ತು ಹೃದಯಸಂಬಂಧಿ ಕಾಯಿಲೆಗಳಿಗೆ ಈಡಾಗುವ ಸಾಧ್ಯತೆ ದಟ್ಟವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.

ಇದರೊಂದಿಗೆ ಇದುವರೆಗೆ ಧರ್ಮದ ರಕ್ಷಾಕವಚದಡಿ ಶಿಕ್ಷಣ, ಆರೋಗ್ಯ ಇತ್ಯಾದಿ ಕ್ಷೇತ್ರಗಳಲ್ಲಿ ದಂಧೆ, ಮುಗ್ಧ ಭಕ್ತರ ಶೋಷಣೆ, ಬ್ರಹ್ಮಚರ್ಯ ವ್ರತಭಂಗ, ಮುಗ್ಧ ಭಕ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಮುಂತಾದ ಹತ್ತಾರು ಅನ್ಯಾಯಗಳಿಗೆ ಸೀಮಿತವಾಗಿದ್ದ ಕೆಲವೊಂದು ಹಿಂದೂ ಸ್ವಾಮಿಗಳ ಅನಾಚಾರಗಳು ಇಂದು ಬೇರೊಂದು, ಅತ್ಯಂತ ಅಪಾಯಕಾರಿ ಮಜಲನ್ನು ತಲುಪಿದಂತೆ ಕಾಣುತ್ತಿದೆ. ಇತ್ತ ಹೊರ ಪ್ರಪಂಚಕ್ಕೆ ತಾವು ಶುದ್ಧ ಬ್ರಹ್ಮಚಾರಿಗಳೆಂದು ತೋರಿಸುತ್ತಾ ಭಕ್ತಗಣಕ್ಕೆ ನೀತಿಬೋಧೆ ನೀಡುತ್ತಾ ಅತ್ತ ನಾನಾ ದಂಧೆಗಳಲ್ಲಿ ತೊಡಗಿಸಿಕೊಂಡು ಕತ್ತಲಾದೊಡನೆ ಹೆಣ್ಮಕ್ಕಳೊಂದಿಗೆ ಚಕ್ಕಂದವಾಡುವ, ಅಧಿಕಾರಸ್ಥರಿಗೆ ಆಪ್ತಬಂಧುಗಳಾಗಿರುವ ಕಚ್ಚೆಹರುಕ ಸ್ವಾಮಿಗಳು, ಮಠಾಧಿಪತಿಗಳು ಮೊದಲಾದವರ ಪಟ್ಟಿಗೆ ಕೊಲೆಗಡುಕ ಸ್ವಾಮಿಗಳೂ ಸೇರಲಾರಂಭಿಸಿದಂತಿದೆ. ಹೀಗೆ ಧರ್ಮದ ಮುಖಂಡರೆನಿಸಿಕೊಂಡವರಿಂದಲೇ ಅಪಾಯ ಹೆಚ್ಚಿರುವಾಗ, ಧರ್ಮದೊಳಗೇ ಆಂತರಿಕ ಸವಾಲುಗಳು, ಸಮಸ್ಯೆಗಳು, ವೈರುಧ್ಯಗಳು ಬೇಕಾದಷ್ಟಿರುವಾಗ, ತನ್ನನ್ನು ‘ಹಿಂದೂ ಪರ’ ಎಂದು ಬಣ್ಣಿಸಿಕೊಳ್ಳುವ ಸಂಘ ಪರಿವಾರ ತನ್ನೆಲ್ಲಾ ಶಕ್ತಿಯನ್ನು ವಿನಿಯೋಗಿಸಿ ಮೊದಲು ಹಿಮ್ಮೆಟ್ಟಿಸಬೇಕಾಗಿರುವುದು ಇಂತಹ ಬೃಹತ್ತಾದ ಆಂತರಿಕ ಅಪಾಯಗಳನ್ನಲ್ಲವೇ? ಆದರೆ ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಬದಲು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಾ ಅನ್ಯಧರ್ಮೀಯರತ್ತ ಬೆರಳು ತೋರಿಸುತ್ತಾ ದುರ್ಭಾಷೆ ಬಳಸುತ್ತಾ ಹಿಂಸೆಗೆ ಪ್ರಚೋದಿಸುವುದರೊಂದಿಗೆ ಅನೈತಿಕ ಪೊಲೀಸ್‌ಗಿರಿ, ಗುಂಪುಹಿಂಸೆಗಳಂತಹ ಅಮಾನವೀಯ, ಅಸಾಂವಿಧಾನಿಕ ಹಾಗೂ ಕಾನೂನುಬಾಹಿರ ದುಷ್ಕರ್ಮಗಳಲ್ಲಿ ನಿರತರಾಗಿರುವುದು ನಮ್ಮ ಕಣ್ಣ ಮುಂದಿರುವ ಕಟುವಾಸ್ತವ!

ಇಂತಹವರ ಮುಗ್ಧ ಅನುಯಾಯಿಗಳು ಮತ್ತು ಬಿಲ್ಲವ, ಮೊಗವೀರ, ದಲಿತ ಮತ್ತಿತರ ತಳಸಮುದಾಯಗಳ ಅಮಾಯಕ ಹಿಂಬಾಲಕರು ಇದನ್ನೆಲ್ಲಾ ಗಮನಿಸಿದ್ದಾರೆಯೇ? ಪ್ರಶ್ನಿಸಿದ್ದಾರೆಯೇ? ದುರದೃಷ್ಟವಶಾತ್ ಭಾವೋದ್ರೇಕದ ಭಾಷಣಗಳು ಮತ್ತು ದ್ವೇಷದ ಮಾತುಗಳಲ್ಲೇ ಕೊಚ್ಚಿಹೋಗುತ್ತಿರುವ ಇವರಿಗೆ ಇದ್ಯಾವುದನ್ನೂ ಮಾಡುವ ಇಚ್ಛಾಶಕ್ತಿ ಇರುವಂತಿಲ್ಲ. ಕನಿಷ್ಠ ಈಗಲಾದರೂ, ಈ ಸುಳ್ವಾಡಿ ಹತ್ಯಾಕಾಂಡದ ನಂತರವಾದರೂ ಎಚ್ಚತ್ತುಕೊಂಡು ಹಿಂದೂ ಧರ್ಮ ಮತ್ತು ಸಂಘ ಪರಿವಾರದ ಹಿಂದುತ್ವ ಕುರಿತಂತೆ ಕೆಲವೊಂದು ಪ್ರಮುಖ ಸತ್ಯಾಂಶಗಳನ್ನು ಅರಿತು ಸಂವಿಧಾನಾತ್ಮಕ ಮಾರ್ಗದಲ್ಲಿ ಚಲಿಸುವರೇ? ಸಂಘ ಪರಿವಾರ ಪದೇ ಪದೇ ಪುನರುಚ್ಚರಿಸುತ್ತಾ ಇರುವ ಹಿಂದುತ್ವಕ್ಕೂ ಹಿಂದೂ ಧರ್ಮಕ್ಕೂ ಯಾವ ಸಂಬಂಧವೂ ಇಲ್ಲ; ಹಿಂದುತ್ವ ಎನ್ನುವುದು ದ್ವೇಷವನ್ನು ಆಧರಿಸಿದ ಒಂದು ರಾಜಕೀಯ ಸಿದ್ಧಾಂತವೇ ಹೊರತು ಧಾರ್ಮಿಕ ತತ್ವ ಅಲ್ಲ ಎಂಬ ಕಟುಸತ್ಯವನ್ನು ಅವರು ಅರಿಯಬೇಕಾಗಿದೆ. ಹಿಂದುತ್ವ ಸಿದ್ಧಾಂತವನ್ನು ತನ್ನ ರಾಜಕೀಯ ಉದ್ದೇಶಗಳಿಗಾಗಿ ಅಳವಡಿಸಿಕೊಂಡಿರುವ ಸಂಘ ಪರಿವಾರ ಮತ್ತು ಅದರೊಂದಿಗೆ ಕೈಜೋಡಿಸಿರುವಂಥ ಮಠಾಧಿಪತಿಗಳು, ಸ್ವಾಮೀಜಿಗಳು ಮತ್ತು ಸಾಧುಸಂತರ ಸೋಗಿನಲ್ಲಿರುವ ಕಪಟ ಕಾವಿಧಾರಿಗಳ ಪಡೆಯೇ ಹಿಂದೂ ಧರ್ಮಕ್ಕೆ ನಿಜವಾದ ಅಪಾಯ ತಂದೊಡ್ಡುತ್ತಿದ್ದಾರೆ. ಅದನ್ನು ದುರ್ಬಲಗೊಳಿಸುತ್ತಿದ್ದಾರೆ ಎಂಬುದನ್ನು ಅವರು ಮನಗಾಣಬೇಕಾಗಿದೆ.

ಸಂಘ ಪರಿವಾರದ ಹಿಂದುತ್ವವಾದಿಗಳು ತಮ್ಮ ಮನಸ್ಸುಗಳಲ್ಲಿ ಅನ್ಯಮತೀಯರ ವಿರುದ್ಧ ದ್ವೇಷದ ಬೀಜವನ್ನು ಬಿತ್ತುವ ಮೂಲಕ ಸಮಾಜದ ಶಾಂತಿ, ಸೌಹಾರ್ದ, ಸಹಬಾಳ್ವೆಗಳನ್ನು ನಾಶಪಡಿಸುವ ಸಂವಿಧಾನ ವಿರೋಧಿ ಕೃತ್ಯಗಳಿಗೆ ತಮ್ಮನ್ನು ಪ್ರಚೋದಿಸುತ್ತಿದ್ದಾರೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕಾಗಿದೆೆ. ಅಸ್ತಿತ್ವದಲ್ಲೇ ಇರದ ಲವ್ ಜಿಹಾದ್, ಅಪ್ಪಟ ರಾಜಕೀಯ ಉದ್ದೇಶದ ಗೋಹತ್ಯೆ ಎಂಬಿತ್ಯಾದಿ ನೆಪಗಳನ್ನು ಮುಂದಿಡುವ ಮೂಲಕ ತಮ್ಮನ್ನು ದಿಕ್ಕು ತಪ್ಪಿಸಲಾಗುತ್ತಿರುವ ಅಸಲಿಯತ್ತನ್ನು ಅವರು ತಿಳಿದುಕೊಳ್ಳಬೇಕಾಗಿದೆ. ಗೋರಕ್ಷಕರಾಗಿ ತಾವು ಬಚಾಯಿಸಿದೆವು ಎಂದುಕೊಂಡ ಜಾನುವಾರುಗಳನ್ನು ಸಾಕಲು ಗೋಶಾಲೆಗಳು ಹಿಂದೇಟು ಹಾಕುತ್ತಿರುವುದು ಅವರಿಗೆ ಗೊತ್ತಿದೆಯೇ? ಇದೇ ಗೋಶಾಲೆಗಳು ಜಾನುವಾರುಗಳನ್ನು ವ್ಯವಸ್ಥಿತವಾಗಿ ಕಸಾಯಿಗಳಿಗೆ ಮಾರುತ್ತಿರುವ ವಾಸ್ತವದ ಅರಿವು ಅವರಿಗಿದೆಯೇ? ಕೊನೆಯದಾಗಿ ಸಂಘ ಪರಿವಾರದ ಹಿಂಬಾಲಕರು ಮತ್ತು ಅದರ ಪದಾತಿ ದಳಗಳು ತಿಳಿಯಬೇಕಾದುದು ಏನೆಂದರೆ ಸಂಘ ಪರಿವಾರದ ಉನ್ನತ ಸ್ಥಾನಗಳನ್ನು ಅಲಂಕರಿಸಿರುವ ಮೇಲ್ಜಾತಿ ಜನರ ಪೂರ್ವಿಕರು ವಾಸ್ತವದಲ್ಲಿ ಈ ಮಣ್ಣಿನ ಮಕ್ಕಳಲ್ಲ; ಅವರು ನಿಜವಾಗಿ ಮಧ್ಯ ಏಶ್ಯಾದಿಂದ ವಲಸೆ ಬಂದ ವಿದೇಶೀಯರು ಎಂದು ಇತ್ತೀಚಿನ ಡಿಎನ್‌ಎ ಆಧರಿತ ಸಂಶೋಧನೆಗಳು ಸಾಬೀತುಪಡಿಸಿವೆ; ಈ ನೆಲದ ನೈಜ ಮೂಲನಿವಾಸಿಗಳಾದ ಆದಿವಾಸಿ, ದಲಿತ, ಹಿಂದುಳಿದ ಸಮುದಾಯಗಳ ಮೇಲೆ ದಬ್ಬಾಳಿಕೆ ನಡೆಸಿದ ಆ ವಲಸಿಗ ವೈದಿಕರು ಅಂತಿಮವಾಗಿ ಜಾತಿವ್ಯವಸ್ಥೆ ಎಂಬ ಚತುರೋಪಾಯದ ಮೂಲಕ ಅವರನ್ನು ಶಿಕ್ಷಣವಂಚಿತರನ್ನಾಗಿಸಿ ತಮ್ಮ ಗುಲಾಮರನ್ನಾಗಿ ಮಾಡಿದರು; ಅವರ ಮೂಲ ಧರ್ಮಗಳನ್ನು ಹಾಗೂ ಆಚರಣೆಗಳನ್ನು ವೈದಿಕ ಧರ್ಮದ ತೆಕ್ಕೆಗೆ ತೆಗೆದುಕೊಂಡು ಹಿಂದೂ ಧರ್ಮ ಎಂಬ ಮಿಶ್ರ ಧರ್ಮವನ್ನು ತಯಾರಿಸಿದರು; ಇದೇ ಎಲ್ಲ ಸಮುದಾಯಗಳ ಧರ್ಮವೆಂದು ಬಿಂಬಿಸಿ ಎಲ್ಲರನ್ನೂ ಇದೇ ಮಿಶ್ರ ಧರ್ಮದ ಛತ್ರಿಯಡಿ ತಂದರು. ವಿದೇಶೀ ವಲಸಿಗರ ವಂಶಜರಾದ ಮೇಲ್ಜಾತಿಗಳು ಈ ನೆಲದ ನೈಜ ಒಡೆಯರಾದ ತಳಸಮುದಾಯಗಳನ್ನು ತಮ್ಮ ಕಪಿಮುಷ್ಟಿಯೊಳಗೆ ಇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಈ ರೀತಿಯಾಗಿ. ಸಂಘ ಪರಿವಾರದ ಹಿಂಬಾಲಕರು ಅದರ ಕಾಲಾಳು ಪಡೆಗಳು ಇನ್ನಾದರೂ ಈ ಎಲ್ಲಾ ಸತ್ಯಗಳನ್ನು ಮನಗಾಣುವರೇ? ತಮ್ಮನ್ನು ಬಂಧಿಸಿರುವ ಧರ್ಮದ ಅದೃಶ್ಯ ಸಂಕಲೆಗಳನ್ನು ಕಳಚಿಕೊಂಡು ಹೊರಬರುವ ತನಕ ತಮಗೂ ಮುಕ್ತಿ ಇರದು, ನಾಡಿಗೂ ಮುಕ್ತಿ ಇರದು ಎಂಬುದನ್ನು ಅರಿಯುವರೇ?

share
ಸುರೇಶ್ ಭಟ್, ಬಾಕ್ರಬೈಲ್
ಸುರೇಶ್ ಭಟ್, ಬಾಕ್ರಬೈಲ್
Next Story
X