ಯುಪಿಎಸ್ಸಿ ಪರೀಕ್ಷೆ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ ಇಳಿಕೆಯಿಲ್ಲ: ಕೇಂದ್ರ ಸರಕಾರ ಸ್ಪಷ್ಟನೆ
ಹೊಸದಿಲ್ಲಿ, ಡಿ.25: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ಇಳಿಸಲಾಗುವುದೆಂಬ ಊಹಾಪೋಹಗಳಿಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತೆರೆ ಎಳೆದಿದ್ದಾರೆ. ಗರಿಷ್ಠ ವಯೋಮಿತಿಯನ್ನು ಇಳಿಸುವ ಯಾವುದೇ ಇರಾದೆ ಕೇಂದ್ರ ಸರಕಾರಕ್ಕಿಲ್ಲ ಎಂದು ಸಿಂಗ್ ಸ್ಪಷ್ಟ ಪಡಿಸಿದ್ದಾರೆ.
ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 27 ವರ್ಷಗಳಿಗೆ ಇಳಿಸುವ ಸಲಹೆಯನ್ನು ನೀತಿ ಆಯೋಗ ಮುಂದಿಟ್ಟ ಕೆಲವೇ ದಿನಗಳಲ್ಲಿ ಈ ಸ್ಪಷ್ಟೀಕರಣ ಬಂದಿದೆ. ಪ್ರಧಾನಿ ಕಾರ್ಯಾಲಯದಲ್ಲಿ ಸಹಾಯಕ ಸಚಿವರಾಗಿರುವ ಸಿಂಗ್ ಸಿಬ್ಬಂದಿ, ಸಾರ್ವಜನಿಕ ದೂರುಗಳು ಹಾಗೂ ಪಿಂಚಣಿ ಖಾತೆಯ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಹಲವಾರು ಸುಧಾರಣಾವಾದಿ ಕ್ರಮಗಳನ್ನು ಸೂಚಿಸಿ ನೀತಿ ಆಯೋಗವು ಇತ್ತೀಚೆಗೆ ವಿಸ್ತೃತ ವರದಿಯನ್ನು ಹೊರತಂದಿತ್ತಲ್ಲದೆ ಅಭ್ಯರ್ಥಿಗಳ ಆಯ್ಕೆ, ತರಬೇತಿ ಹಾಗೂ ಅವರ ಕಾರ್ಯನಿರ್ವಹಣೆ ಮೌಲ್ಯಮಾಪನ ಕುರಿತಂತೆ ಹಲವು ಬದಲಾವಣೆಗಳನ್ನು ಶಿಫಾರಸು ಮಾಡಿತ್ತು.
Next Story