ಬಂಟ್ವಾಳ: ತಂಡದಿಂದ ಹಲ್ಲೆ ಪ್ರಕರಣ; ಮೂವರು ಸೆರೆ
ಬಂಟ್ವಾಳ, ಡಿ. 21: ಕ್ಷುಲ್ಲಕ ಕಾರಣಕ್ಕೆ ತಂಡವೊಂದು ಅಂಗಡಿಗೆ ನುಗ್ಗಿ ಮಾಲಕನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಬಂಧಿಸಿ ಮೂವರು ಆರೋಪಿಗಳನ್ನು ವಿಟ್ಲ ಪೊಲೀಸರು ಉಕ್ಕುಡ ಎಂಬಲ್ಲಿ ಮಂಗಳವಾರ ಬಂಧಿಸಿದ್ದಾರೆ.
ಕಾಶಿಮಠ ನಿವಾಸಿ ಯೋಗೀಶ್, ಕೋಲ್ಪೆ ನಿವಾಸಿ ರಾಧಾಕೃಷ್ಣ ಹಾಗೂ ಉಕ್ಕುಡ ಕಲ್ಲುರ್ಟಿಯಡ್ಕ ನಿವಾಸಿ ಸಂತೋಷ್ ಬಂಧಿತ ಆರೋಪಿಗಳಾಗಿದ್ದು, ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿ. 21ರಂದು ಆರೋಪಿಗಳ ತಂಡ ವಿಟ್ಲ ಕಸಬಾ ಗ್ರಾಮದ ಕಬ್ಬಿನಹಿತ್ತಿಲು ನಿವಾಸಿ ನವನೀತ ಶೆಣೈ ಎಂಬರಿಗೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ ಪರಾರಿಯಾಗಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Next Story