ಸಯ್ಯದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್: ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ

ಉಳ್ಳಾಲ, ಡಿ. 25: ಸಯ್ಯದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಶರೀಯತ್ ಕಾಲೇಜು, ಜೂನಿಯರ್ ಕಾಲೇಜು, ದಅವಾ ಕಾಲೇಜು, ಮೋರಲ್ ಅಕಾಡೆಮಿ, ಹಿಫ್ಝುಲ್ ಖುರಾನ್ ಕಾಲೇಜು ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಬಳಿಕ ಮಾತನಾಡಿದ ಅವರು ನಾವೆಲ್ಲರೂ ಸಂತೋಷದ ನೆಮ್ಮದಿಯ, ತಾಳ್ಮೆಯ, ಸಹೋದರತೆಯ ಜೀವನವನ್ನು ಮಾಡಲು ದೇವರು ನಮಗೆ ವಿಶೇಷವಾದ ಶಕ್ತಿ ನೀಡಿ ಸರ್ವರ ಪ್ರೀತಿಗೆ ಪಾತ್ರವಾಗುವ ಅವಕಾಶ ಸಿಗಲಿ ಎಂದು ಹೇಳಿದರು.
ಸಯ್ಯದ್ ಮದನಿ ದರ್ಗಾ ಅಧ್ಯಕ್ಷರಾದ ಅಬ್ದುಲ್ ರಶೀದ್ ಹಾಜಿ ಅಧ್ಯಕ್ಷತೆ ವಹಿಸಿದರು, ಅಬ್ದುಲ್ಲ ಫೈಝಿ ವೆಲ್ಲಿಮುಕ್ಕ ದುಆ ನೆರವೇರಿಸಿದರು, ಶರೀಅತ್ ಕಾಲೇಜು ಪ್ರಾಂಶುಪಾಲರಾದ ಉಸ್ಮಾನ್ ಫೈಝಿ ತೋಡಾರ್, ಅರಬಿಕ್ ಟ್ರಸ್ಟ್ ಮುಫತ್ತಿಸ್ ಸುಲೈಮಾನ್ ಸಖಾಫಿ, ಸಯ್ಯದ್ ಮದನಿ ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ತ್ವಾಹಾ ಮೊಹಮ್ಮದ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ, ಉಳ್ಳಾಲ ನಗರ ಸಭೆ ಸದಸ್ಯ ಅಯ್ಯೂಬ್ ಮಂಚಿಲ, ಸಯ್ಯದ್ ಮದನಿ ದರ್ಗಾ ಲೆಕ್ಕ ಪರಿಶೋಧಕ ಯು.ಕೆ.ಇಲ್ಯಾಸ್, ಅರಬಿಕ್ ಟ್ರಸ್ಟ್ ಕೋಶಾಧಿಕಾರಿ ಯು.ಪಿ.ಅಬ್ಬಾಸ್, ಬೆಂಗಳೂರು ಉದ್ಯಮಿ ಝುಬೇರ್ ಅಹ್ಮದ್, ಉದ್ಯಮಿ ಹಮ್ಮಬ್ಬ, ಸಾಲ್ಮರ ಅಡ್ವಕೇಟ್, ಕಬೀರ್ ಉಳ್ಳಾಲ್,ಅದ್ದಾಮ,ಮೊದಲಾದವರು ಉಪಸ್ಥಿತರಿದ್ದರು.
ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ ಸ್ವಾಗತಿಸಿದರು, ಸಲಾಂ ಮದನಿ ಉಳ್ಳಾಲ ಮತ್ತು ಅಬ್ದುಲ್ ಖಾದರ್ ರಝಾ ನಯೀಮಿ ಕಾರ್ಯಕ್ರಮ ನಿರೂಪಿಸಿದರು, ಹಿಫ್ಲುಲ್ ಖುರಾನ್ ಪ್ರಾಂಶುಪಾಲ ಝೈನ್ ಸಖಾಫಿ ವಂದಿಸಿದರು.