ಉಡುಪಿ: ಅಟಲ್ ಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತರು
ಉಡುಪಿ, ಡಿ.25: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವ, ನಾಯಕತ್ವ ಹಾಗೂ ದೇಶಕ್ಕೆ ನೀಡಿದ ಕೊಡುಗೆಗಳನ್ನು ಯುವ ಜನಾಂಗ ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಕ ರಘುಪತಿ ಭಟ್ ಹೇಳಿದರು.
ನಗರ ಬಿಜೆಪಿ ವತಿಯಿಂದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಅಟಲ್ ಭಾವಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಗರಾಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ, ಗಿರೀಶ್ ಅಂಚನ್, ಅಕ್ಷತ್ ಶೆಟ್ಟಿ, ಉಪೇಂದ್ರ ನಾಯಕ್, ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಸುಧಾಕರ ಆಚಾರ್ಯ, ರಮೇಶ್ ಕಿದಿಯೂರು, ಶ್ರೀಧರ ತೊಟ್ಟಂ ಭಾಗವಹಿಸಿದ್ದರು. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು.
ವಾಜಪೇಯಿ ಚಿತ್ರ ಬರೆಯುವ ಸ್ಪರ್ಧೆಯಲ್ಲಿ 1ರಿಂದ 4ನೇ ತರಗತಿ ವಿಭಾಗದಲ್ಲಿ ಟ್ರಿನಿಟಿ ಶಾಲೆಯ ವಿಶ್ವಾಸ್ ಪ್ರಥಮ, ಜಿಎಂ ವಿದ್ಯಾನಿಕೇತನ ಶಾಲೆಯ ಧೃತಿ ದ್ವಿತೀಯ, ಮುಕುಂದಕೃಪಾ ಶಾಲೆಯ ಸಿಂಚನಾ ತೃತೀಯ ಸ್ಥಾನ ಪಡೆದರು. 5ರಿಂದ 7ನೇ ತರಗತಿ ವಿಭಾಗದಲ್ಲಿ ಸಂತ ಸಿಸಿಲಿ ಶಾಲೆಯ ಮಾನ್ಯಾ ಪ್ರಥಮ, ಮುಕುಂದ ಕೃಪಾ ಶಾಲೆಯ ದಿಶಾ ಆಚಾರ್ಯ ದ್ವಿತೀಯ, ಜಿಎಂ ವಿದ್ಯಾನಿಕೇತನ ಶಾಲೆಯ ಅದಿತಿ ತೃತೀಯ ಸ್ಥಾನ ಪಡೆದರು.
8ರಿಂದ 10ನೇ ತರಗತಿ ವಿಭಾಗದಲ್ಲಿ ಮಿಲಾಗ್ರಿಸ್ ಶಾಲೆಯ ಅನ್ವಿತಾ ಕೇಶವ ಪ್ರಥಮ, ವೌಂಟ್ ರೋಸರಿ ಶಾಲೆಯ ಹರ್ಷಿತಾ ದ್ವಿತೀಯ, ಟಿ.ಎ. ಪೈ ಆಂಗ್ಲ ಮಾಧ್ಯಮ ಶಾಲೆಯ ದರ್ಶನ್ ಭಂಡಾರಿ ತೃತೀಯ ಸ್ಥಾನ ಪಡೆದಿದ್ದಾರೆ.