ದ.ಆಫ್ರಿಕ ಪರ ಅತ್ಯಧಿಕ ವಿಕೆಟ್ ಸಾಧನೆ ಹಾದಿಯಲ್ಲಿ ಸ್ಟೇಯ್ನ್

ಜೋಹಾನ್ಸ್‌ಬರ್ಗ್, ಡಿ.25: ಟೆಸ್ಟ್ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕ ತಂಡದ ಪರ ಅತ್ಯಧಿಕ ವಿಕೆಟ್ ಪಡೆಯುವ ಸಾಧನೆಯ ಹಾದಿದಲ್ಲಿ ವೇಗದ ಬೌಲರ್ ಡೇಲ್ ಸ್ಟೇಯ್ನಿ ಇದ್ದಾರೆ. ಸದ್ಯ ಮಾಜಿ ಆಟಗಾರ ಶಾನ್ ಪೋಲಾಕ್ ಹಾಗೂ ಸ್ಟೇಯ್ನಾ ತಲಾ 421 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ.
ಬಹು ದಿನಗಳ ನಂತರ ಹರಿಣಗಳ ತಂಡದಲ್ಲಿ ಸ್ಥಾನ ಪಡೆದಿರುವ ಸ್ಟೇಯ್ನಾ, ಪಾಕಿಸ್ತಾನದ ವಿರುದ್ಧ ಡಿ.26ರಿಂದ ಆರಂಭವಾಗುವ ಟೆಸ್ಟ್‌ನಲ್ಲಿ ತಮ್ಮ ಸಾಧನೆ ತೋರಲು ಉತ್ಸುಕರಾಗಿದ್ದಾರೆ. ಇನ್ನೊಂದು ವಿಕೆಟ್ ಪಡೆದರೆ ಅವರು, ತಂಡದ ಪರ ಅತ್ಯಂತ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲಿದ್ದಾರೆ.
ನನ್ನ ಗುರಿ ಬರೀ ದಾಖಲೆ ಮಾಡುವುದಲ್ಲ. ಅದಕ್ಕಿಂತ ಹೆಚ್ಚಿನ ಆಕಾಂಕ್ಷೆಯನ್ನು ನಾನು ಹೊಂದಿದ್ದೇನೆ. 35 ವರ್ಷ ವಯಸ್ಸಾದರೂ ಇನ್ನೂ 23ರ ಯುವಕನಂತೆ ಆಡಬೇಕೆನಿಸುತ್ತಿದೆ ಎಂದು ವೇಗಿ ಸ್ಟೇಯ್ನಿ ವೆಬ್‌ಸೈಟ್‌ವೊಂದಕ್ಕೆ ಹೇಳಿದ್ದಾರೆ.
ದಾಖಲೆಯ ಗೌರವಕ್ಕೆ ಪಾತ್ರವಾಗುವುದು ಒಂದು ಉತ್ತಮ ಸಂಗತಿ. ಆದರೆ ಅದರಾಚೆಗೂ ಮುಂದುವರಿಯಬೇಕಾದ ಅವಶ್ಯಕತೆಯಿದೆ ಎಂದು ಅವರು ಹೇಳಿದ್ದಾರೆ.
ತಮಗಾದ ಗಾಯದ ಬಗ್ಗೆ ಮಾತನಾಡಿರುವ ಅವರು, ಸಾಕಷ್ಟು ಜನ ನನ್ನ ಗಾಯದ ಗಂಭೀರತೆಯನ್ನು ಅರಿತಿಲ್ಲ. ಆ ಕಡೆ ಗಮನ ಕೊಡದೆ ಮುಂದುವರಿಯಬೇಕು ಎಂದು ಹೇಳಿದ್ದಾರೆ.







