ಭಟ್ಕಳ: ನ್ಯಾಯವಾದಿ ಮಾರುತಿ ನಾಯ್ಕ ನಿಧನ

ಭಟ್ಕಳ, ಡಿ. 26: ಇಲ್ಲಿನ ಜೆ.ಎಮ್.ಎಫ್.ಸಿ.ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಿರ್ವಹಿಸುತ್ತಿದ್ದ ಮಾರುತಿ ನಾಯ್ಕ (37) ಉಡುಪಿ ಅಜರಗಾಡ ಸರಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಮಿದುಳು ಸಂಬಂಧಿತ ಕಾಯಿಲೆಯಿಂದ ಮೃತಪಟ್ಟಿದ್ದಾರೆ.
ಇವರು ಇಲ್ಲಿನ ಹಿರಿಯ ವಕೀಲ ಜೆ.ಡಿ.ಭಟ್ಟ ಅವರಲ್ಲಿ ಕಳೆದ 10 ವರ್ಷದಿಂದ ಸಹಾಯಕ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಧಾರವಾಡದ ಲಾ ಕಾಲೇಜಿನಲ್ಲಿ ಕಾನೂನು ವ್ಯಾಸಂಗವನ್ನು ಮುಗಿಸಿದ್ದರು. ಸೋಮವಾರ ಬೆಳಿಗ್ಗೆ ಮನೆಯಲ್ಲಿ ಕುಸಿದು ಬಿದ್ದ ಹಿನ್ನೆಲೆ ತಾಲೂಕಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದು ವೈದ್ಯರು ತಪಾಸಣೆ ಮಾಡಿದ್ದು ನಂತರ ಹೆಚ್ಚಿನ ತಪಾಸಣೆ ಹಿನ್ನೆಲೆ ಮಣಿಪಾಲ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ಅಲ್ಲಿನ ವೈದ್ಯರು ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು ಕೊನೆಯ ಹಂತದಲ್ಲಿದ್ದ ಹಿನ್ನೆಲೆ ಉಡುಪಿ ಸರಕಾರಿ ಆಸ್ಪತ್ರೆ ಕಳುಹಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.
ಶಾಸಕ ಸುನೀಲ ನಾಯ್ಕ, ತಾಲೂಕಾ ಪಂಚಾಯತ್ ಉಪಾಧ್ಯಕ್ಷೆ ರಾಧಾ ವೈದ್ಯ, ಬಾರ್ ಅಸೋಶಿಯೇಶ ಅಧ್ಯಕ್ಷ ಕಮಲಾಕರ ಬೈರುಮನೆ, ಹಿರಿಯ ವಕೀಲ ಆರ್.ಆರ್. ಶ್ರೇಷ್ಟಿ, ಎಸ್.ಬಿ.ಬೊಮ್ಮಾಯಿ, ರಾಜೇಶ ನಾಯ್ಕ, ವಿಕ್ಟರ ಗೋಮ್ಸ, ನಾಗರಾಜ ಹೆಗಡೆ, ಕೆ.ಎಚ್.ನಾಯ್ಕ, ಉದಯ ನಾಯ್ಕ, ನಾಗರಾಜ ಈ.ಎಚ್., ಪಾಂಡು ನಾಯ್ಕ, ನಾಗರಾಜ ಎಸ್. ನಾಯ್ಕ ಸೇರಿದಂತೆ ತಾಲೂಕಿನ ವಕೀಲರು ಅಂತಿಮ ದರ್ಶನ ಪಡೆದರು.





