ಮಂಗಳೂರು-ಹೈದರಾಬಾದ್ ಮಲ್ಟಿ ಆಕ್ಸೆಲ್ ಬಸ್ ಸೇವೆ
ಮಂಗಳೂರು, ಡಿ.26: ಕೆಎಸ್ಸಾರ್ಟಿಸಿ ಮಂಗಳೂರಿನಿಂದ ಉಡುಪಿ, ಕುಂದಾಪುರ, ಭಟ್ಕಳ, ಹುಬ್ಬಳ್ಳಿ, ಗದಗ, ಕೊಪ್ಪಳ, ಸಿಂಧನೂರು, ರಾಯಚೂರು ಮಾರ್ಗವಾಗಿ ಹೈದರಾಬಾದ್‌ಗೆ ಹಾಗೂ ಹೈದರಾಬಾದ್‌ನಿಂದ ಇದೇ ಮಾರ್ಗವಾಗಿ ಮಂಗಳೂರಿಗೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಲ್ಟಿ ಆಕ್ಸೆಲ್ ಬಸ್ ಕಾರ್ಯಾಚರಿಸಲಿದೆ.
ಈ ಸಾರಿಗೆಯು ಮಂಗಳೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ಉಡುಪಿ 4, ಮಣಿಪಾಲ 4:10, ಕುಂದಾಪುರ 5, ಭಟ್ಕಳ 6 ಗಂಟೆಗೆ ತಲುಪಿ ಇದೇ ಮಾರ್ಗವಾಗಿ ಹೈದರಾಬಾದ್‌ಗೆ ಬೆಳಗ್ಗೆ 8:30ಕ್ಕೆ ತಲುಪಲಿದೆ. ಮರುಪ್ರಯಾಣದಲ್ಲಿ ಹೈದರಾಬಾದ್‌ನಿಂದ ಸಂಜೆ 5 ಗಂಟೆಗೆ ಹೊರಟು ರಾಯಚೂರು 9:20, ಕುಂದಾಪುರ 8:50, ಮಂಗಳೂರಿಗೆ ಬೆಳಗ್ಗೆ 10:30ಕ್ಕೆ ತಲುಪಲಿದೆ.
ಈ ಸಾರಿಗೆಗೆ ವಾರದ ದಿನಗಳಾದ ಸೋಮವಾರ, ಮಂಗಳವಾರ, ಬುಧವಾರ ಮತ್ತು ಗುರುವಾರಗಳಂದು ಒಟ್ಟು ಪ್ರಯಾಣ ದರ 1,100 ರೂ. ಹಾಗೂ ವಾರಾಂತ್ಯದ ದಿನಗಳಾದ ಶುಕ್ರವಾರ, ಶನಿವಾರ ಮತ್ತು ರವಿವಾರಗಳಂದು ಒಟ್ಟು ಪ್ರಯಾಣ ದರ 1,700 ರೂ.ನ್ನು ಪಡೆದು ಸಾರಿಗೆ ಕಾರ್ಯಾಚರಣೆ ನಡೆಸಲಿದೆ.
ಈ ಸಾರಿಗೆಗೆ ‘ಅವತಾರ್’ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆ ತಿಳಿಸಿದೆ.