ರಾಮಲಿಂಗಾ ರೆಡ್ಡಿಗೆ ಸೂಕ್ತ ಸ್ಥಾನ ನೀಡದಿದ್ದರೆ ರಾಜೀನಾಮೆ: ಬಿಬಿಎಂಪಿ ಮೇಯರ್ ಎಚ್ಚರಿಕೆ

ಮೇಯರ್ ಗಂಗಾಂಬಿಕೆ- ರಾಮಲಿಂಗಾ ರೆಡ್ಡಿ
ಬೆಂಗಳೂರು, ಡಿ.26: ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲೂ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಿಂಗಾರೆಡ್ಡಿ ಅವರು ಪಕ್ಷದ ನಿಷ್ಠರು ಮತ್ತು ಬೆಂಗಳೂರು ಮೇಯರ್ ಸ್ಥಾನ ಕಾಂಗ್ರೆಸ್ ಸಿಗಲು ಅವರೇ ಕಾರಣರು. ಅವರಿಗೆ ಸೂಕ್ತ ಸ್ಥಾನ ನೀಡದಿದ್ದರೆ ಮೇಯರ್ ಸ್ಥಾನ ನಮಗೂ ಬೇಡ ಎಂದರು.
ರಾಮಲಿಂಗಾರೆಡ್ಡಿ ಅವರನ್ನು ಬೆಂಬಲಿಸುವ ಹಲವು ಬಿಬಿಎಂಪಿ ಸದಸ್ಯರು ಇದ್ದು, ನಾವೆಲ್ಲರೂ ಸಾಮೂಹಿಕ ರಾಜೀನಾಮೆ ನೀಡಲು ಸಿದ್ಧರಿದ್ದೇವೆ. ಲೋಕಸಭಾ ಚುನಾವಣೆಯ ನಂತರ ರೆಡ್ಡಿಯವರಿಗೆ ಸೂಕ್ತ ಸ್ಥಾನಮಾನ ನೀಡುವುದಾಗಿ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ವೇಣುಗೋಪಾಲ್ ಹೇಳಿರುವುದಾಗಿ ಮಾಹಿತಿ ನೀಡಿದರು.
ಒಂದು ವೇಳೆ ಲೋಕಸಭೆ ಸಾರ್ವತ್ರಿಕ ಚುನಾವಣೆಯ ನಂತರವೂ ಮಂತ್ರಿ ಸ್ಥಾನ ಕೊಡದಿದ್ದರೆ ರಾಜೀನಾಮೆಗೆ ಬದ್ಧ ಎಂದು ಗಂಗಾಂಬಿಕೆ ಹೇಳಿದರು.
Next Story





