ಡಿ. 27: ರಾಷ್ಟ್ರಪತಿ ಉಡುಪಿಗೆ ಆಗಮನ; ಅಂಗಡಿ ಮುಚ್ಚಲು ಆದೇಶ

ಉಡುಪಿ, ಡಿ. 26: ಭಾರತದ ರಾಷ್ಟ್ರಪತಿಗಳು ಡಿ.27ರಂದು ಉಡುಪಿಗೆ ಆಗಮಿಸಿ, ಸರ್ಕ್ಯೂಟ್ ಹೌಸ್, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿರುವುದರಿಂದ ಭದ್ರತಾ ದೃಷ್ಠಿಯಿಂದ, ಉಡುಪಿಯ ಸಂಸ್ಕೃತ ಕಾಲೇಜು ಪಕ್ಕದ ಗೇಟಿನಿಂದ ಸಂಪೂರ್ಣ ರಥಬೀದಿ ಸುತ್ತ, ರಾಜಾಂಗಣದ ಸುತ್ತಮುತ್ತ ಇರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಡಿ.27ರ ಸಂಜೆ 4 ಗಂಟೆಯವರೆಗೆ ಮುಚ್ಚುವಂತೆ ಹಾಗೂ ಸಾರ್ವಜನಿಕರಿಗೆ ಬೆಳಗ್ಗೆ 6ರಿಂದ ಸಂಜೆ 4 ಗಂಟೆಯವರೆಗೆ ಶ್ರೀಕೃಷ್ಣ ಮಠದ ಭೇಟಿಯನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊಡಿಸಿದ್ದಾರೆ.
Next Story