ಅಫ್ಘಾನ್ ತಾಲಿಬಾನ್ ಜೊತೆ ಇರಾನ್ ಮಾತುಕತೆ
ಟೆಹರಾನ್, ಡಿ. 26: ಅಫ್ಘಾನ್ ತಾಲಿಬಾನ್ ಜೊತೆಗೆ ಇರಾನ್ ಮಾತುಕತೆ ನಡೆಸಿದೆ ಎಂಬುದಾಗಿ ಇರಾನ್ನ ಉನ್ನತ ಭದ್ರತಾ ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ತಸ್ನಿಮ್’ ಸುದ್ದಿ ಸಂಸ್ಥೆ ಬುಧವಾರ ವರದಿ ಮಾಡಿದೆ.
‘‘ತಾಲಿಬಾನ್ ಜೊತೆಗೆ ಮಾತುಕತೆ ನಡೆಸಿದ ವಿಷಯವನ್ನು ಅಫ್ಘಾನ್ ಸರಕಾರಕ್ಕೆ ತಿಳಿಸಲಾಗಿದೆ ಹಾಗೂ ಈ ಪ್ರಕ್ರಿಯೆ ಮುಂದುವರಿಯುತ್ತದೆ’’ ಎಂದು ಇರಾನ್ನ ಅತ್ಯುನ್ನತ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯದರ್ಶಿ ಅಲಿ ಶಮ್ಖಾನಿ ಹೇಳಿದ್ದಾರೆ ಎಂದು ತಸ್ನಿಮ್ ತಿಳಿಸಿದೆ.
ಮಾತುಕತೆ ಎಲ್ಲಿ ನಡೆಯಿತು ಎಂಬ ವಿವರಗಳನ್ನು ಸುದ್ದಿ ಸಂಸ್ಥೆ ನೀಡಿಲ್ಲ.
Next Story