ಬಿಕರ್ನಕಟ್ಟೆ: ಕಂಟೈನರ್ ಲಾರಿ - ಬೈಕ್ ಢಿಕ್ಕಿ; ವಿದ್ಯಾರ್ಥಿ ಮೃತ್ಯು

ಮಂಗಳೂರು, ಡಿ.26: ಕಂಟೈನರ್ ಲಾರಿ ಮತ್ತು ಬೈಕ್ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನಗರದ ಬಿಕರ್ನಕಟ್ಟೆಯ ಮರೋಳಿ ಸಮೀಪ ಬುಧವಾರ ನಡೆದಿದೆ.
ಉಡುಪಿಯ ಕುಂದಾಪುರ ನಿವಾಸಿ, ಸಿಎ ವಿದ್ಯಾರ್ಥಿ ವಿಜೇತ್ ರಾವ್ (21) ಮೃತರು ಎಂದು ಗುರುತಿಸಲಾಗಿದೆ.
ಅವರು ಮಂಗಳೂರಿನಲ್ಲಿ ಚಾರ್ಟೆಂಡ್ ಅಕೌಂಟೆಂಟ್ (ಸಿಎ) ಕಾರ್ಯನಿರ್ವಹಿಸುತ್ತಿದ್ದರು. ಬೆಳಗ್ಗೆ ಅಡ್ಯಾರ್‌ನಲ್ಲಿದ್ದ ತನ್ನ ರೂಮ್‌ನಿಂದ ಮಂಗಳೂರಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬಿಕರ್ನಕಟ್ಟೆಯ ಮರೋಳಿ ತಲುಪಿದ ವೇಳೆ ಈ ಅಪಘಾತ ನಡೆದಿದೆ.
ವಿಜೇತ್ ಅವರು ಪಡೀಲ್ ಮಾರ್ಗದಿಂದ ನಂತೂರು ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಲಾರಿಗೆ ಬೈಕ್ ಹಿಂದಿನಿಂದ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದ್ದು, ಪರಿಣಾಮ ಗಂಭೀರವಾಗಿ ಗಾಯಗೊಂಡು ರಸ್ತೆಗೆಸೆಯಲ್ಪಟ್ಟ ವಿಜೇತ್‌ರನ್ನು ನಗರದ ಖಾಸಗಿ ಆಸ್ಪತೆಗೆ ದಾಖಲಿಸಲಾಯಿತಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಮೃತಪಟ್ಟಿದ್ದಾರೆ.
ಈ ಕುರಿತು ನಗರ ಸಂಚಾರ ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.