ವಿಶ್ವವಿದ್ಯಾಲಯದಲ್ಲಿ ಸ್ಫೋಟ: 3 ವಿದ್ಯಾರ್ಥಿಗಳ ಸಾವು

ಬೀಜಿಂಗ್, ಡಿ. 26: ಚೀನಾ ರಾಜಧಾನಿ ಬೀಜಿಂಗ್‌ನ ವಿಶ್ವವಿದ್ಯಾನಿಲಯವೊಂದರ ಪ್ರಯೋಗಾಲಯದಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ನಗರದ ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಸ್ಫೋಟದಿಂದಾಗಿ ಪ್ರಯೋಗಾಲಯದ ಕಿಟಿಕಿ, ಬಾಗಿಲುಗಳು ಹಾರಿ ಹೋಗಿವೆ.
‘‘ಪರಿಸರ ಇಂಜಿನಿಯರಿಂಗ್ ಪ್ರಯೋಗಾಲಯದಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಸಂಬಂಧಿಸಿದ ವೈಜ್ಞಾನಿಕ ಸಂಶೋಧನಾ ಪ್ರಯೋಗವೊಂದು ನಡೆಯುತ್ತಿದ್ದ ವೇಳೆ ಸ್ಫೋಟವೊಂದು ಸಂಭವಿಸಿದೆ’’ ಎಂದು ಬೀಜಿಂಗ್ ಅಗ್ನಿಶಾಮಕ ಇಲಾಖೆ ಹೇಳಿದೆ.
ಬೀಜಿಂಗ್‌ನ ‘ಬೀಜಿಂಗ್ ಜಿಯಾವೊಟಾಂಗ್ ವಿಶ್ವವಿದ್ಯಾನಿಲಯ’ದಲ್ಲಿ ಬುಧವಾರ ಬೆಳಗ್ಗೆ ಸುಮಾರು 9:30ಕ್ಕೆ ದುರಂತ ಸಂಭವಿಸಿದೆ.
Next Story





