ಮೈಸೂರು: ಟ್ರಾನ್ಸ್ ಜೆಂಡರ್ ಮಸೂದೆ ರದ್ದತಿಗೆ ಒತ್ತಾಯಿಸಿ ತೃತೀಯ ಲಿಂಗಿಗಳ ಪ್ರತಿಭಟನೆ
ಮೈಸೂರು,ಡಿ.26: ಟ್ರಾನ್ಸ್ ಜೆಂಡರ್ ಮಸೂದೆ ರದ್ದು ಪಡಿಸುವಂತೆ ಒತ್ತಾಯಿಸಿ ತೃತೀಯ ಲಿಂಗಿಗಳು ಮತ್ತು ಪುರುಷ ಲೈಂಗಿಕ ಕಾರ್ಯಕರ್ತರು ಆಶೋದಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರತಿಭಟನಾಕಾರರು, ಟ್ರಾನ್ಸ್ ಜೆಂಡರ್ ಮಸೂದೆ ರದ್ದು ಪಡಿಸಬೇಕು, ಲೈಂಗಿಕ ವೃತ್ತಿ ಮತ್ತು ಭಿಕ್ಷಾಟನೆ ನಮ್ಮ ಹಕ್ಕು, ಟ್ರಾನ್ಸ್ ವಿರೋಧಿ ಮನಸುಗಳಿಗೆ ಧಿಕ್ಕಾರವಿರಲಿ ಎಂದು ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಅನಿತಾ, ಮಂಜುಳ, ನೇತ್ರ, ಪಂಕಜ ಸೇರಿದಂತೆ ಹಲವು ತೃತೀಯ ಲಿಂಗಿಗಳು ಪಾಲ್ಗೊಂಡಿದ್ದರು.
Next Story





