ಮೂಡುಬಿದಿರೆ: ವಿದ್ಯಾರ್ಥಿ ನಾಪತ್ತೆ

ಮೂಡುಬಿದಿರೆ, ಡಿ. 26: ಹಾಸ್ಟೆಲ್ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿರುವುದಾಗಿ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜ್ವಲ್ ಎನ್. (16) ನಾಪತ್ತೆಯಾದ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಹಡಗಲು ಗ್ರಾಮದ ನಾಗರಾಜ ಎಚ್.ಜಿ. ಎಂಬವರ ಪುತ್ರ ಪ್ರಜ್ವಲ್ 5 ಅಡಿ 3 ಇಂಚು ಎತ್ತರವಿದ್ದು, ಕಪ್ಪು ಮೈಬಣ್ಣ ಹೊಂದಿದ್ದಾನೆ. ಸಾಧಾರಣ ಶರೀರ, ಕೋಲು ಮುಖ, ಮುಖದಲ್ಲಿ ಮೊಡವೆಗಳಿವೆ. ನಾಪತ್ತೆಯಾದಂದು ಬಿಳಿ ಬಣ್ಣದ ಅಲ್ಲಲ್ಲಿ ಚುಕ್ಕೆಗಳಿರುವ ಉದ್ದ ತೋಳಿನ ಅಂಗಿ, ಕಪ್ಪು ಬಣ್ಣದ ಜಾಕೆಟ್, ಆಕಾಶ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆ ಬಲ್ಲವನಾಗಿದ್ದಾನೆ.
ಹೆಚ್ಚಿನ ಮಾಹಿತಿಗಾಗಿ ಮೂಡುಬಿದಿರೆ ಪೊಲೀಸ್ ಠಾಣೆ: 08258 - 236333, ಪೊಲೀಸ್ ಆಯುಕ್ತರ ಕಛೇರಿ ಮಂಗಳೂರು ನಗರ : 0824-2220801, ಮಂಗಳೂರು ನಗರ ನಿಸ್ತಂತು ನಿಯಂತ್ರಣ ಕೊಠಡಿ : 0824 - 2220800 ಸಂಪರ್ಕಿಸಬಹುದಾಗಿದೆ.
Next Story